ಸಂಘಗಳು ಸ್ವಾವಲಂಬಿತನವನ್ನು ಕಲಿಸುವ ಕೇಂದ್ರಗಳು: ಪ್ರಸಾದ್

ಸಂಡೂರು:ಜ:10- ಸಂಘಗಳು ಎಂದರೆ ಬರೀ ಹಣ ಮಾಡುವ, ಹಂಚುವ ಕಾರ್ಯಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ಸಹ ಸ್ವಾವಲಂಬಿ, ಸಾಮರಸ್ಯದ ಬದುಕನ್ನು ಸಾಗಿಸುವಂತಹ ಕೇಂದ್ರಗಳು ಎನ್ನುವುದನ್ನು ಯಾರು ಮಾರೆಯಬಾರದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಸಂಘ ತಾಲೂಕು ಯೋಜನಾಧಿಕಾರಿ ಪ್ರಸಾದ್ ತಿಳಿಸಿದರು.
ಅವರು ತಾಲೂಕಿನ ವಿಠಲಾಪುರ ವಲಯದ ತಾರಾನಗರ ಕಾರ್ಯಕ್ಷೇತ್ರದ 120 ಸಂಘಗಳ ಲೆಕ್ಕ ಪರಿಶೋಧನೆ ಮತ್ತು ಪ್ರಗತಿ ಪರಿಶೀಲನೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿ ಇಂದು ತಾಲೂಕಿನಾದ್ಯಂತ ನೂರಾರು ಮಹಿಳೆಯರು ಸಂಘದ ಲಾಭವನ್ನು ಪಡೆದುಕೊಂಡು ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದಾರೆ, ಅಲ್ಲದೆ ಸ್ವ ಉದ್ಯೋಗಗಳನ್ನು ಪ್ರಾರಂಭಿಸಿದ್ದಾರೆ, ಪ್ರಮುಖವಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸುವುದರ ಜೊತೆಗೆ ಕುಟುಂಬ ನಿರ್ವಹಣೆಯನ್ನು ಅತಿ ಉತ್ತಮವಾಗಿ ಮಾಡುತ್ತಿದ್ದು ಶ್ರೀ ಕ್ಷೇತ್ರ ಪ್ರಾರಂಭಿಸಿದ ಈ ಕಾರ್ಯ ಗುರುಮುಟ್ಟುತ್ತಿದೆ, ಅದರೂ ಸಹ ನಾವು ವೈಯಕ್ತಿಕ ಬೆಳೆಯುವುದರ ಜೊತೆಗೆ ಸಮಾಜದ ಪ್ರಗತಿಯನ್ನು ಸಹ ಚಿಂತಿಸಬೇಕು, ಸಾಮೂಹಿಕ ಜೀವನ, ಪರಸ್ಪರ ಸಹಕಾರ, ಸ್ನೇಹ, ದುಶ್ಚಟಗಳಿಂದ ದೂರ ಉಳಿಯುವಂತಹ ಕಾರ್ಯಗಳು ನಿರಂತರವಾಗಿ ಸಾಗಬೇಕು ಎಂದರು.
ಈ ಸಂದರ್ಭದಲ್ಲಿ 120 ಸಂಘಗಳಿಗೆ ಲೆಕ್ಕ ಪರಿಶೋಧನೆ ನಡೆಸಿ ಅವರ ಪರಿಶೋಧನಾ ವರದಿಯನ್ನು ನೀಡುವ ಮೂಲಕ ಅವರ ಪ್ರಗತಿಯನ್ನು ತಿಳಿಸಲಾಯಿತು ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕ ಶರಣಬಸಪ್ಪ ಆಚಾರ್ಯ, ಮೇಲ್ವಿಚಾರಕರಾದ ಅಷ್ಪಕ್ ಅಲಿದೇಲಾಲ್, ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು ಪೂರ್ಣ ಪ್ರಮಾಣದ ಮಾಹಿತಿ ಪಡೆದು ತಾವೂ ಸಹ ಪ್ರಗತಿ ಸಾಧಿಸುವಮತ್ತು ಯೋಜನೆಯಿಂದ ಸಿಗವ ಲಾಭಗಳ ಬಗ್ಗೆ ಚರ್ಚಿಸಿದರು