ಸಂಗ್ವಾರ:ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ದೋಖಾ ಭೇಟಿ

ಸೈದಾಪುರ:ಜೂ.4:ಇಲ್ಲಿಗೆ ಸಮೀಪದ ಸಂಗ್ವಾರ ಗ್ರಾಮದ ರೈತ ನಂಜುಂಡ ನಾಗಣ್ಣೋರ ಸಾಲಬಾಧೆಯಿಂದ ನಿನ್ನೆ ತಡ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ ಪಕ್ಷದ ಮುಖಂಡ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಶರಣಿಕಕುಮಾರ ದೋಖಾ ಭೇಟಿ ನೀಡಿ ಕುಟಂಬ ವರ್ಗಕ್ಕೆ ಸಾಂತ್ವಾನ ಹೇಳಿ ದೈರ್ಯ ತುಂಬಿದರು. ಸರಕಾರದ ಗನಮಕ್ಕೆ ತಂದು ಪರಿಹಾರ ಕೊಡಿಸುವ ಭರವಸೆ ನೀಡಿದರು. ನಿಮ್ಮ ಕುಟುಂಬದ ಜೊತೆಗೆ ನಾವಿದ್ದೇವೆ. ಮಕ್ಕಳ ಭವಿಷ್ಯಕ್ಕಾಗಿ ಅನುಕೂಲ ಕಲ್ಪಿಸುವ ಕೆಲಸ ಮಾಡಲಾಗುವುದು ಎಂದು ವೈಯಕ್ತಿ ಧನಸಹಾಯವನ್ನು ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ದುಪ್ಪಲ್ಲಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ ಕಂದಳ್ಳಿ, ನರಸಪ್ಪ, ರಾಘು, ಮಾಳಪ್ಪ, ಬಸವರಾಜ ಸೇರಿದಂತೆ ಇತರರಿದ್ದರು.