ಸಂಗ್ರಾಮ ಕಲ್ಲು ಎತ್ತುವ ಸ್ಫರ್ದೆ


ಮುನವಳ್ಳಿ,ಮಾ.14: ಪಟ್ಟಣದ ಶ್ರೀ ಪಂಚಲಿಂಗೇಶ್ವರ ಶಿವರಾತ್ರಿ ಜಾತ್ರಾ ನಿಮಿತ್ಯವಾಗಿ ದೇವಸ್ಥಾನದ ಪಕ್ಕದ ಮೈದಾನದಲ್ಲಿ ಮಾರ್ಚ 13ರಂದು ಜರುಗಿದ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಹಲವಾರು ಯುವಕರು ಸ್ಪರ್ದಿಸಿದ್ದರು ಅದರಲ್ಲಿ ಪ್ರಥಮ ಸ್ಥಳಿಯ ಮೌಲಾಸಾಬ ಚುರಿಖಾನ, ದ್ವಿತೀಯ ಯಾನೂಸ ತೊರಗಲ್, ತೃತೀಯ ಬನಹಟ್ಟಿ ಗ್ರಾಮದ ಮುತ್ತಪ್ಪ ಬನಹಟ್ಟಿ ಬಹುಮಾನ ವಿಜೇತರಾದರು.
ಜಾತ್ರಾ ಕಮಿಟಿಯ ಅಧ್ಯಕ್ಷರು ಸದಸ್ಯರು ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಸನ್ಮಾನಿಸಿದರು.
ಅಂಬರೀಷ ಯಲಿಗಾರ, ಮೋಹನ ಕಾಮನ್ನವರ, ಮಲ್ಲಿಕಾರ್ಜುನ ಕಮತಗಿ, ಪ್ರಕಾಶ ಕಾಮನ್ನವರ, ಗಂಗಪ್ಪ ನಲವಡೆ, ಕಲ್ಲಪ್ಪ ಕಿತ್ತೂರ, ಅಂದಾನಿ ಗೊಮಾಡಿ, ನಾಗಪ್ಪ ಕಾಮನ್ನವರ, ಪಂಚಪ್ಪ ಚಂದರಗಿ, ಉಮೇಶ ಚುಳಕಿ ಇತರರು ಉಪಸ್ಥಿತರಿದ್ದರು.