ಸಂಗೋಳ್ಳಿ ರಾಯಣ್ಣ ಮೂರ್ತಿ ಅದ್ದೂರಿ ಮೆರವಣಿಗೆ

ಮುದ್ದೇಬಿಹಾಳ:ನ.14: ತಾಲೂಕಿನ ಮಲಗಲದಿನ್ನಿ ಗ್ರಾಮದಲ್ಲಿ ಪ್ರತಿಷ್ಟಾಪಿಸಲಿರುವ ಸಂಗೋಳ್ಳಿ ರಾಯಣ್ಣ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಗುರುವಾರ ಪಟ್ಟಣದ ಪೀಲೆಕ್ಕೆಮ್ಮ ನಗರದಿಂದ ಪ್ರಾರಂಭವಾದ ಮೆರವಣಿಗೆಯು ಬಸವೇಶ್ವರ ವೃತ್ತ, ಕಿತ್ತೂರ ಚನ್ನಮ್ಮ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಡೋಳ್ಳು ಬಾರಿಸುವದು ಸೇರಿದಂತೆ ಗ್ರಾಮದ ಯುವಕರು ಹಾಡು ಕುಣಿತದೋಂದಿಗೆ ಮೆರವಣಿಗೆ ನಡೆಸಲಾಯಿತು. ಮಲಗಲದಿನ್ನಿಯ ಎಲ್ಲ ಸಮುದಾಯದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೋಂಡಿರುವದು ವಿಶೇಷವಾಗಿತ್ತು.ಸಂಗೋಳ್ಳಿ ರಾಯಣ್ಣ ಮೂರ್ತಿಯನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗ್ರಾಮದಿಂದ ಒಂದು ಲಕ್ಷ ವೆಚ್ಚದ ಮೂರ್ತಿಯನ್ನು ತಂದಿರುವದಾಗಿ ಮಲಗಲದಿನ್ನಿ ಗ್ರಾಮಸ್ಥರು ತಿಳಿಸಿದ್ದಾರೆ.
ಈ ಸಮಯದಲ್ಲಿ ವಿರೇಶ ನೆರಬೆಂಚಿ, ಮುತ್ತು ಕುರುಬಗೌಡರ, ಹಣಮಂತ್ರಾಯ ಪಾಟೀಲ, ಬಸನಗೌಡ ಪಾಟೀಲ, ಸಿದ್ದಪ್ಪ ನೆರಬೆಂಚಿ, ಪಿಕೆಪಿಎಸ್ ಅಧ್ಯಕ್ಷ ಹುಲಗಪ್ಪ ಕುರುಬಗೌಡರ, ಚಂದ್ರಾಮಪ್ಪ ನೆರಬೆಂಚಿ, ಶಿವರಾಯ ಪ್ಯಾಟಿ, ಶರಣಯ್ಯ ಹಿರೇಮಠ, ಗುರುರಾಜ ಇಲ್ಲೂರ, ಬಸಣ್ಣ ಬಿರಾದಾರ, ನಾನಪ್ಪ ಬಡಿಗೇರ, ಬಸಪ್ಪ ಮಾದರ, ಅಶೋಕ ಕುಲಕರ್ಣಿ, ಬಸಪ್ಪ ಯಾಳವಾರ, ರಸೂಲ ಮುಲ್ಲಾ, ಕಲ್ಲಣ್ಣ ಪ್ಯಾಟಿ, ಸಿದ್ರಾಮಪ್ಪ ಪ್ಯಾಟಿ, ವೀರಭದ್ರಯ್ಯ ಪ್ಯಾಟಿ, ಸಾಹೇಬಗೌಡ ಪಾಟೀಲ, ಚನ್ನಪ್ಪ ನೆರಬೆಂಚಿ, ಪರಮಣ್ಣ ನೇರಬೆಂಚಿ, ಬಸಯ್ಯ ಹಿರೇಮಠ, ಬಸಪ್ಪ ಹುಲ್ಲಿಕೇರಿ, ಮುತ್ತು ಕನ್ನೂರ,ನಾಗರಾಜ ಹಿರೇಕುರುಬರ ಮತ್ತಿತರರು ಇದ್ದರು.