ಸಂಗೋಳ್ಳಿ ರಾಯಣ್ಣರ ಶೌರ್ಯ ಮತ್ತು ಆದರ್ಶ ಬದುಕು ಇಂದಿನ ಸಮುದಾಯಕ್ಕೆ ದಾರಿದೀಪವಾಗಿದೆ :ಸಿದ್ದರಾಮಯ್ಯ

ಕೆಂಭಾವಿ:ಜು.15:ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ತನ್ನ ಜೀವನವನ್ನೇ ನಾಡಿನ ಸೇವೆಗಾಗಿ ಮುಡುಪಾಗಿಟ್ಟ ಅಪ್ರತಿಮ ದೇಶ ಭಕ್ತರಾಗಿದ್ದಾರೆ. ಹೀಗಾಗಿ ರಾಯಣ್ಣನವರ ಶೌರ್ಯ ಮತ್ತು ಆದರ್ಶದ ಬದುಕು ಇಂದಿನ ಯುವ ಸಮುದಾಯಕ್ಕೆ ದಾರಿ ದೀಪವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಪಟ್ಟಣ ಸಮೀಪದ ಕಿರದಳ್ಳಿ ಗ್ರಾಮದಲ್ಲಿ ಗುರುವಾರ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನವರ ಮೂರ್ತಿ ಉದ್ಘಾಟಿಸಿ ಮಾತನಾಡಿದ ಅವರು, ರಾಯಣ್ಣನ ಸ್ವಾಭಿಮಾನ ವರ್ಣನೆಗೆ ಮೀರಿದೆ. ತನ್ನ ತಾಯಿಗಿಂತ ಹೆಚ್ಚಾಗಿ ಪ್ರೀತಿಸಿದ ಚೆನ್ನಮ್ಮಾಜಿಯಲ್ಲಿ ಇರಿಸಿದ್ದ ಆದಮ್ಯ ನಿಷ್ಠೆಯ ಭಕ್ತಿ, ಕಿತ್ತೂರು ನಾಡ ಉಳಿವಿಗಾಗಿ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಸಂಗೋಳ್ಳಿ ರಾಯಣ್ಣ ಸೇರಿದಂತೆ ಅನೇಕ ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರು ಸರ್ವ ಸಮುದಾಯದ ಆಸ್ತಿಯಾಗಿದ್ದಾರೆ. ರಾಯಣ್ಣನ ಬದುಕಿನುದ್ದಕ್ಕೂ ನಡೆಸಿದ ಹೋರಾಟ ದೇಶದ ಸ್ವಾತಂತ್ರ??ಕ್ಕಾಗಿ ಎಂಬುದನ್ನು ಅರಿತು ಎಲ್ಲರೂ ಪ್ರೀತಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಪಾಟೀಲ ಹುಲಕಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೆಕ್ಕೆಮ್ಮ ಬೋವಿ, ಹಯ್ಯಾಳಲಿಂಗೇಶ್ವರ ದೇವಸ್ಥಾನದ ಪೂಜ್ಯ ಸಕ್ರೆಪ್ಪ ಪೂಜಾರಿ, ಖಂಡಪ್ಪ ತಾತ ನಗನೂರ, ಬೂದನೂರ ಪೂಜ್ಯರು, ಮುಖಂಡರಾದ ಅಮೀನರೆಡ್ಡಿಗೌಡ ಪಾಟೀಲ ಕಿರದಳ್ಳಿ, ಮಲ್ಲಣ್ಣ ಹೆಗ್ಗೇರಿ, ಭೀಮರೆಡ್ಡಿ ದೇಸಾಯಿ, ಮಡಿವಾಳಪ್ಪ ದೇಸಾಯಿ, ಕೃಷ್ಣಪ್ಪ ಕಕ್ಕಸಗೇರಿ, ಹಯ್ಯಾಳಪ್ಪ ನಡಕೂರ, ಮಲ್ಲನಗೌಡ ಪೆÇಲೀಸ್ ಪಾಟೀಲ, ರಾಮಸ್ವಾಮಿ ಬೋವಿ ಸೇರಿದಂತೆ ಸಂಗೋಳ್ಳಿ ರಾಯಣ್ಣ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರಿದ್ದರು.