ಸಂಗೊಳ್ಳಿ ರಾಯಣ್ಣ ಸಮುದಾಯ ಭವನ ನಿರ್ಮಾಣಕ್ಕಾಗಿ ಸಚಿವರಿಗೆ :ಮನವಿ

ಗಬ್ಬೂರು.ಜೂ.೯-ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮವು ಸುತ್ತ ಮುತ್ತ ೩೦ ಕ್ಕೂ ಹೆಚ್ಚು ಹಳ್ಳಿಯ ಕುರುಬ ಸಮುದಾಯದ ಜನರಿಗೆ ಕೇಂದ್ರ ಬಿಂದುವಾಗಿದೆ. ಗಬ್ಬೂರಿಗೆ ದಿನಾಲು ಸಾವಿರಾರು ಸಮಾಜದ ಬಂಧುಗಳು ಬಂದು ಹೋಗುತ್ತಾರೆ.ಕುರುಬ ಸಮಾಜದ ಸಂಪ್ರದಾಯಿಕ ಕಲೆಗಳಾದ ಡೊಳ್ಳು ಕುಣಿತ ಕಲಿಯಲು,ಕನಕದಾಸ ಜಯಂತಿ ಆಚರಣೆ ಮಾಡಲು ಕುರುಬ ಸಮಾಜದ ಜನರು ಹಾಗೂ ಸಂಘದ ಸಮಸ್ಯೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಕುಳಿತು ಕೊಳ್ಳಲು ಸ್ಥಳವಿಲ್ಲ. ಗಬ್ಬೂರು ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಮುದಾಯ ಭವನವನ್ನು ಮಂಜೂರು ಮಾಡಿ ನಿರ್ಮಾಣ ಮಾಡಬೇಕೆಂದು ಗಬ್ಬೂರು ಹೋಬಳಿ ಸಮಾಜದ ವತಿಯಿಂದ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಮನವಿ ಮಾಡುತ್ತಿದ್ದೇವೆ.ಈ ಸಂದರ್ಭದಲ್ಲಿ ಅಯ್ಯಪ್ಪ ಗಬ್ಬೂರು ಮುಖಂಡರು ಮಂಜುನಾಥ ಕರಿಗಾರ,ನಾಗಪ್ಪ ಗಾ.ಪಂ.ಸದಸ್ಯರು,ಗುರುರಾಜ ವಾಟರ್ ಮ್ಯಾನ್, ಸಿದ್ದಪ್ಪ ಕರಿಗಾರ ಇನ್ನುಳಿದ ಸಮಾಜದ ಮುಖಂಡರು ಉಪಸ್ಥಿತಿ ರಿದ್ದರು.