ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ

(ಸಂಜೆವಾಣಿ ವಾರ್ತೆ)
ಕುಂದಗೋಳ ಆ 17 : ರಾಣಿ ಚೆನ್ನಮ್ಮ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಅವರ ಪರಾಕ್ರಮಕ್ಕೆ ನಲುಗಿದ ಬ್ರಿಟಿಷ್ ಅಧಿಕಾರಿಗಳು ಕಿತ್ತೂರು ನಾಡಿನಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಹರಸಾಹಸ ಪಡಬೇಕಾಯಿತು ಎಂದು ಕಾಂಗ್ರೆಸ್ ಮುಖಂಡ ಗೌಡಪ್ಪಗೌಡ ಪಾಟೀಲ ಅವರು ಹೇಳಿದರು.
ಕುಂದಗೋಳ ಕಾಳಿದಾಸ ನಗರದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಜಯಂತಿಯಲ್ಲಿ ಅವರು ಪಾಲ್ಗೊಂಡು ರಾಯಣ್ಣ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ರಾಷ್ಟ್ರ ಕಂಡ ಅಪ್ರತಿಮ ದೇಶಭಕ್ತ, ವೀರ ಸಂಗೊಳ್ಳಿ ರಾಯಣ್ಣ ತನ್ನ ಕೆಚ್ಚೆದೆಯ ಬಂಟಗಾರಿಕೆಗೆ ಬೆದರಿದ ಆಂಗ್ಲರು ಕಿತ್ತೂರನ್ನು ಕಿತ್ತುಕೊಳ್ಳಲು ಅನೇಕರು ಸಂಚು ರೂಪಿಸಬೇಕಾಗಿ, ಮೋಸದಿಂದ ಸೆರೆ ಹಿಡಿದರೂ ಜಗ್ಗದ ರಾಯಣ್ಣನ ನಿಷ್ಠೆಯನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದರು.
ನಂತರ ಗೌಡಪ್ಪಗೌಡ ಅವರನ್ನು ಸಮಾಜ ಮುಖಂಡರಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಲಕ್ಷ್ಮಣ ಚುಳಕಿ, ಅಡಿವೆಪ್ಪ ಬಂಡಿವಾಡ, ಎಂ. ಎಂ. ಮಖಾಂದಾರ್ ಸೇರಿದಂತೆ ಅನೇಕರಿದ್ದರು.