
ಸೇಡಂ, ಮಾ, 25: ನಾಳೆ ಸ್ವಾತಂತ್ರ ಹೋರಾಟಗಾರರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮ ಇದ್ದು ಇಂದು ಡಿಸಿಸಿ ಅಧ್ಯಕ್ಷರು ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ್ ಬೇಟಿ ನೀಡಿ ಪರಿಶೀಲಿಸಿದರು. ಈ ವೇಳೆಯಲ್ಲಿ ರಾಯಣ್ಣನವರ ಸಮಿತಿ ಅಧ್ಯಕ್ಷ ಮಂಜುನಾಥ ಎನ್ ಪೂಜಾರಿ ಕಾಚೂರ, ಅನಿಲಕುಮಾರ್ ಪಾಟೀಲ್ ತೇಲ್ಕೂರ, ಸತೀಶ್ ಪೂಜಾರಿ, ವಸಂತಕುಮಾರ್ ಪೂಜಾರಿ, ಹಣಮಂತ ಪೂಜಾರಿ, ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.