
ಸಂಜೆವಾಣಿ ವಾರ್ತೆ
ಸಂಡೂರು: ಅ: 16: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ದೇಶದ ಪ್ರಥಮ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಮಹಾನ್ ನಾಯಕನಾಗಿದ್ದಾರೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಸೇನೆಯ ಅಧ್ಯಕ್ಷ ಪ್ರಕಾಶ್.ಕೆ. ತಿಳಿಸಿದರು.
ಅವರು ಪಟ್ಟಣದ ಕನಕಭವನದಲ್ಲಿ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಭಾರತದಲ್ಲಿ ಬ್ರೀಟೀಷರ ವಿರುದ್ದ ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹಾನ್ ನಾಯಕರು ಹೋರಾಟಮಾಡಿದ ಫಲವಾಗಿ ಇಂದು ನಾವು ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಾ ನೆಮ್ಮದಿಯಾಗಿದ್ದೇವೆ, ಅದಕ್ಕೆ ಅವರ ತ್ಯಾಗ ಬಲಿದಾನವೇ ಕಾರಣವಾಗಿದೆ, ಕಿತ್ತೂರಿನ ರಾಣಿ ಚನ್ನಮ್ಮಾಜಿಯ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಅಂದೇ ಬ್ರೀಟೀಷರ ವಿರುದ್ದ ಸಿಡಿದೆದ್ದಿದ್ದ, ಥ್ಯಾಕರೆ ಸೋಲಿಸುವಲ್ಲಿ ಸಂಗೋಳ್ಳಿ ರಾಯಣ್ಣನ ಪಾತ್ರ ಅಮೋಘವಾದುದು, ಅಂದು ಎಲ್ಲರೂ ಒಟ್ಟಾಗಿದ್ದರ ಬ್ರಿಟೀಷರು ಎಂದೋ ದೇಶ ಬಿಟ್ಟು ಓಡುತ್ತಿದ್ದರು, ಅದರೆ ನಮ್ಮವರೆ ನಮಗೆ ಮೋಸ ಮಾಡಿದ ಫಲವಾಗಿ 1947ರ ವರೆಗೆ ಕಾಯಬೇಕಾಯಿತು ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಪ್ರಕಾಶ್.ಕೆ. ಕೃಷ್ಣಾನಗರ ಗ್ರಾಮಘಟಕದ ಅಧ್ಯಕ್ಷ ತಿಮ್ಮಪ್ಪ. ಕೆ. ಬೆಂಡಿಕಾಯಿ, ಚಂದ್ರಪ್ಪ, ಅಭಿಷೇಖ್, ಶಶಿಕುಮಾರ್, ಶಿವಪುತ್ರಪ್ಪ, ಕುಮಾರ್.ಬಿ., ಶರಣಬಸಪ್ಪ, ಹುಟ್ಟಪ್ಪ, ಶ್ರೀನಿವಾಸ್, ಕುಮಾರ್.ಎಂ., ತಿಪ್ಪೇಸ್ವಾಮಿ.ಕೆ. ಕುಮಾರ.ಕೆ. ತಾಳೂರು ಹಾಲುಮತದ ಬಾಂಧವರು, ಬಂಡೆಸ್ವಾಮಿ, ಸಣ್ಣ ಯಂಕಪ್ಪ, ಹುಚ್ಚಪ್ಪ, ಹನುಮಂತಪ್ಪ, ಗವಿಸಿದ್ದಪ್ಪ, ಹುಲುಗಪ್ಪ ರಾಮಾಂಜಿನೇಯ, ಶರಣ.ಕೆ. ಶಂಕ್ರಪ್ಪ ಕೆ. ಗಂಗಪ್ಪ ಇತರ ಹಲವಾರು ಮುಖಂಡರು ಉಪಸ್ಥಿತರಿದ್ದರು.
One attachment • Scanned by Gmail