ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದ ಆರೋಪಿ ಬಂಧನ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.12: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆಯ ಪೆÇಲಿಸ್ ನಿರೀಕ್ಷಕ ಆನಂದೇಗೌಡರ ನೇತೃತ್ವದ ಪೆÇಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬೀಕನಹಳ್ಳಿ ಗ್ರಾಮದ ಹಾಲುಮತ ಸಮುದಾಯಕ್ಕೆ ಸೇರಿದ ಮೋಹನ(30) ಬಿನ್ ಅಣ್ಣೇಗೌಡ ಬಂಧಿತ ವ್ಯಕ್ತಿ.
ತಾಲ್ಲೂಕಿನ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಬುಧವಾರ (ಮೇ, 08) ರಾತ್ರಿ ಕಿಡಿಗೇಡಿಯೊಬ್ಬ ಸ್ವಾತಂತ್ರ?ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣರ ಪ್ರತಿಮೆಯ ಖಡ್ಗ, ಖಡ್ಗದ ಪಟ್ಟಿ ಮತ್ತು ಕಾಲಿನ ಪಾದವನ್ನು ಮುರಿದು ಪರಾರಿಯಾಗಿದ್ದ. ಮರುದಿನ ದಿನ ಬೆಳಿಗ್ಗೆ ಗ್ರಾಮಸ್ಥರು ರಾಯಣ್ಣರ ಪ್ರತಿಮೆ ಭಗ್ನಗೊಂಡಿರುವುದನ್ನು ಕಂಡು ಆಕ್ರೋಶಕ್ಕೆ ಒಳಗಾಗಿದ್ದರು. ಇದರ ಜತೆಗೆ ರಾಜ್ಯಮಟ್ಟದ ಕುರುಬ ಜನಾಂಗದ ಮುಖಂಡರು ಸ್ಥಳಕ್ಕೆ ಭೇಟಿ ಕೊಟ್ಟು ಪ್ರತಿಭಟಿಸಿ ದುಷ್ಕರ್ಮಿಯನ್ನು ಬಂಧಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಿದ್ದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೆÇೀಲಿಸ್ ಇಲಾಖೆ ಅದೇ ದಿನ ಬೆರಳಚ್ಚು ತಂತ್ರಜ್ಞರು ಮತ್ತು ಪೆÇೀಲೀಸ್ ಶ್ವಾನ ತರಬೇತುದಾರ ನಾಗರಾಜ್ ರವರ ಗರಡಿಯಲ್ಲಿ ಪಳಗಿರುವ ಭೈರವ ಶ್ವಾನವನ್ನು ಕರೆಸಿ ಆರೋಪಿಯ ಪತ್ತೆಗೆ ತಡಕಾಡಿದರು. ಈ ಸಂಧರ್ಭದಲ್ಲಿ ಶ್ವಾನ ಭೈರವ ಅದೇ ಗ್ರಾಮದ ಮೋಹನ್ ಅಲಿಯಾಸ್ ಗುಂಡ ರವರ ಮನೆ ಬಳಿ ಸಾಗಿ ಆತನ ಗುರುತನ್ನು ಪೆÇೀಲೀಸರಿಗೆ ಸಾಕ್ಷ್ಯ ಒದಗಿಸಿತ್ತು. ಇದರ ಆಧಾರದ ಮೇಲೆ ತನಿಖೆ ಆರಂಭಿಸಿದ ಪೆÇೀಲೀಸರು ಆರೋಪಿ ಮೋಹನ್ ನನ್ನು ಬಂಧಿಸಿ ಆತನ ವಿರುದ್ದ ಪ್ರಕರಣ ದಾಖಲಿಸಿದೆ. ಸದರಿ ಆರೋಪಿಯು ಬೆಂಗಳೂರಿನ ಹೋಟೆಲ್ ನಲ್ಲಿ ಅಡುಗೆ ಭಟ್ಟನಾಗಿರುವುದು ತಿಳಿದು ಬಂದಿದೆ. ಈ ನಡುವೆ ಘಟನೆ ನಡೆದ ಎರಡು ದಿನದ ನಂತರ ಆತ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿರುವುದು ಪೆÇೀಲೀಸ್ ಬಾತ್ಮಿದಾರರಿಂದ ತಿಳಿದು ಬಂದಿದೆ. ತಕ್ಷಣ ಗ್ರಾಮಾಂತರ ಪೆÇೀಲಿಸ್ ಠಾಣೆ ಇನ್ಸ್ಪೆಕ್ಟರ್ ಆನಂದೇಗೌಡ ಮತ್ತು ಸಬ್ ಇನ್ಸ್ಪೆಕ್ಟರ್ ಸುಬ್ಬಯ್ಯ ನೇತೃತ್ವದ ತಂಡ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಆತನು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ .
ಕಳೆದ 11 ತಿಂಗಳ ಹಿಂದೆ ಬೀಕನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಸ್ಥಾಪನೆ ಮಾಡಿದ್ದಾಗ ಈತನನ್ನು ಗ್ರಾಮಸ್ಥರು ಪರಿಗಣನೆ ಮಾಡಲಿಲ್ಲ ಎಂಬ ಅಸಮಾಧಾನ ಈತನಿಗೆ ಇತ್ತು. ಈತ ಕಳೆದ ಬುಧವಾರ ಊರಿಗೆ ಬಂದಾಗ ಮದ್ಯಪಾನ ಮಾಡಿ ರಾತ್ರಿ ಸಮಯದಲ್ಲಿ ಸದರಿ ಪ್ರತಿಮೆಯನ್ನು ವಿರೂಪಗೊಳಿಸಿ ಪ್ರತಿಮೆಯ ಖಡ್ಗ ಹಾಗೂ ಖಡ್ಗದ ಪಟ್ಟಿಯನ್ನು ಮುರಿದುಕೊಂಡು ತನ್ನ ಮನೆಯ ಬಳಿಯ ಇರುವ ಹುಲ್ಲಿನ ಮೆದೆಯಲ್ಲಿ ಅಡಗಿಸಿ ಇಟ್ಟಿದ್ದನು ಇವುಗಳನ್ನು ತನಿಖಾ ಸಂಧರ್ಭದಲ್ಲಿ ಪೆÇೀಲೀಸರು ವಶಪಡಿಸಿಕೊಂಡಿದ್ದಾರೆ ಸದರಿ ತನಿಖಾ ತಂಡವಾದ ಗ್ರಾಮಾಂತರ ಪೆÇೀಲಿಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆನಂದೇಗೌಡ , ಸಬ್ ಇನ್ಸ್ಪೆಕ್ಟರ್ ಸುಬ್ಬಯ್ಯ, ತನಿಖಾ ಸಹಾಯಕರಾದ ವೈರಮುಡಿ, ಜಯವರ್ಧನ ಮತ್ತು ಅರುಣ್‍ಕುಮಾರ್ ರವರನ್ನು ಜಿಲ್ಲಾ ವರಿಷ್ಟಾಧಿಕಾರಿಗಳಾದ ಯತೀಶ್ ರವರು ಅಭಿನಂದಿಸಿದ್ದಾರೆ.