ಸಂಗೀತ, ಸಾಹಿತ್ಯ ಮತ್ತು ಆಧ್ಯಾತ್ಮಿಕ ಚಿಂತಕ ಪಂಡಿತ ಪುಟ್ಟರಾಜ :ಲಕ್ಕುಂಡಿಮಠ

ವಿಜಯಪುರ :ಮಾ.5: ಸಂಗೀತ ಸಾಹಿತ್ಯ ಹಾಗು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರವಚನ ಮೂಲಕ ಪಂಡಿತ ಪುಟ್ಟರಾಜ ಗವಾಯಿಗಳು ದೇಶದ ಗಮನ ಸೆಳೆದರು ಎಂದು ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮ ದಿನಾಚರಣೆಯ ನಿಮಿತ್ತ ಮುಖ್ಯ ಅತಿಥಿಗಳಾಗಿ ಮಾತನಾಡಿದರು

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಪೆÇ್ರ ಮಲ್ಲಿಕಾರ್ಜುನ ಅವಟಿ ಮಾತನಾಡಿ ಹಿಂದುಸ್ತಾನಿ ಮತ್ತು ಕನಾ9ಟಕ ಸಂಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರೆನಿಸಿಕೊಂಡರು.

ಗುರು ಪಂಡಿತ ಪಂಚಾಕ್ಷರಿ ಗವಾಯಿಗಳ ನಿಧನದ ನಂತರ ಶ್ರೀ ವೀರೇಶ್ವರ ಪುಣ್ಯಾಶ್ರಮ ಮುನ್ನಡೆಸಿಕೊಂಡರು. 35 ನಾಟಕಗಳನ್ನು ಹಾಗು ಪುರಾಣಗಳನ್ನು ರಚಸಿದ್ದಾರೆ ಎಂದರು ಕಸಾಪ ಸಹ ಕಾಯ9ದಶಿ9

ಅಭಿಷೇಕ ಚಕ್ರವರ್ತಿ ಮಾತನಾಡಿ 1961 ರಲ್ಲಿ ಹಿಂದಿಯಲ್ಲಿ ಬಸವ ಪುರಾಣ ರಚಿಸಿದ ಪುಟ್ಟರಾಜ ಗವಾಯಿಗಳಿಗೆ ರಾಷ್ಟ್ರಪತಿ ಡಾ ಬಾಬು ರಾಜೇಂದ್ರ ಪ್ರಸಾದ ಸತ್ಕರಿಸಿದರು .ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ .ಕನಾ9ಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರ ಪ್ರಶಸ್ತಿಯನ್ನು ಪಡೆದು ಸಂಗೀತ ಕ್ಷೇತ್ರವನ್ನು ಶ್ರೀಮಂತಗೋಳಿಸಿದರು.ಎಂದರು

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಪೆÇ್ರ ಮಹಾದೇವ ರಬಿನಾಳ

ಡಾ ಸಂಗಮೇಶ ಮೇತ್ರಿ ದಿಲಾವರ ಖಾಜಿ ಡಾ ಸುಜಾತಾ ಚಲವಾದಿ ಡಿ ಬಿ ನಾಯಕ ರಾಜು ಶಿವನಗುತ್ತಿ ಸಂಗೀತಾ ಮಠಪತಿ ಸಖದೇವಿ ಅಲಬಾಳಮಠ ಕಮಲಾ ಮುರಾಳ ಮುಂತಾದವರರು ಉಪಸ್ಥಿತರಿದ್ದರು.