
ಕಲಬುರಗಿ :ಮಾ.17: ಶ್ರೀ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ದಾಸೋಹ ಮೂರ್ತಿ ಶ್ರೀ ಶರಣಬಸವೇಶ್ವರ'ರ ಮಹಾ ಪುರಾಣ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಸಂಗೀತ ಕಲಾವಿದರಾದ ರಾಜು ಹಿರೇಮಠ ಹಾಗು ಅಶ್ವಿನಿ ಹಿರೇಮಠ ದಂಪತಿಗಳಿಗೆ
ಶಂಕರ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅವರು ತಾಲೂಕಿನ ಸುಕ್ಷೇತ್ರ ಕಡಣಿಯಲ್ಲಿ ನಡೆದ ಸಮಾರಂಭದಲ್ಲಿ ಗುರುವಾರ ಸಂಜೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮ ಸಾನಿಧ್ಯ ವಹಿಸಿ ಪುರಾಣ ಹೇಳುತ್ತಿರುವ ಚಿನ್ಮಯಗಿರಿಯ ಪೂಜ್ಯಶ್ರೀ ಷ.ಬ್ರ. ವೀರಮಹಾಂತೇಶ್ವರ ಶಿವಾಚಾರ್ಯರು, ಮಾದನ ಹಿಪ್ಪರಗಿ ಶ್ರೀಗಳು, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಿದ್ಧಣಗೌಡ ಕೆ. ಮಾಲಿ ಪಾಟೀಲ ಸೇರಿದಂತೆ ಅನೇಕರು ಅತಿಥಿಗಳಾಗಿ ಆಗಮಿಸಿ ಉಪಸ್ಥಿತರಿದ್ದರು ಅಪಾರ ಸಂಖ್ಯೆಯಲ್ಲಿ ಭಕ್ತಕೋಟಿ ಜನ ಭಾಗವಹಿಸಿದ್ದರು.
ಪ್ರಶಸ್ತಿ ಪುರಸ್ಕøತರು ಕಳೆದ ದಶಕಗಳಿಂದ ಕಲಬುರಗಿ, ಬೀದರ, ಯಾದಗಿರಿ, ವಿಜಯಪುರ ಜಿಲ್ಲೆಗಳ ಶ್ರೀಮಠಗಳಲ್ಲಿ ಸಂಗೀತ ಸೇವೆ ನೀಡಿ ಸಾಧನೆಯ ಹಾದಿಯಲ್ಲಿ ತಮ್ಮದೇಯಾದ ಹೆಜ್ಜೆ ಗುರುತುಗಳು ಮೂಡಿಸಿದ್ದಾರೆ.