ಕಲಬುರಗಿ:ಜೂ.23: ಕರ್ನಾಟಕ ಕಲಾ ಸಾಹಿತ್ಯ ಸಂಸ್ಕøತಿ ಸೇವಾ ಸಂಸ್ಥೆ ವತಿಯಿಂದ ಪಂಡಿತ ಪಂಚಾಕ್ಷರ ಗವಾಯಿಗಳವರ 79ನೇ ಹಾಗೂ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 13 ನೇ ಪುಣ್ಯಸ್ಮರಣೆ ಅಂಗವಾಗಿ ಜೂ. 24 ರಂದು ಸಂಗೀತ ಸಮಾರಾಧನೆ, ರಾಜ್ಯಮಟ್ಟದ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 11 ಗಂಟೆಗೆ ಇಲ್ಲಿನ ಕನ್ನಡ ಭವನದ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗುರುಗಳ ಭಾವಚಿತ್ರಕ್ಕೆ ಶಾಸಕ ಎಂ.ವೈ. ಪಾಟೀಲ್ ಪೂಜೆ ಸಲ್ಲಿಸುವರು. ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಲಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ್ ಅಧ್ಯಕ್ಷತೆ ವಹಿಸುವವರು. ಉದ್ದಿಮೆದಾರ ಎಸ್.ವೈ. ಪಾಟೀಲ್, ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಡಿ. ಮೂಲಗೆ, ಶಿವಶರಣಪ್ಪ ಕೋಬಾಳ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಪ್ರವೀಣ ವಿದ್ಯಾ ಸಂಸ್ಥೆ ಅಧ್ಯಕ್ಷ ನಾಗರಾಜ ಕಾಂಬಳೆ, ಮಹಾಜನ ಫೌಂಡೇಷನ್ ಅಧ್ಯಕ್ಷ ಶಿವಕಾಂತ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಹಿರಿಯ ಪತ್ರಕರ್ತರಾದ ಬಾಬುರಾವ ಯಡ್ರಾಮಿ, ಸಂಗಮನಾಥ ರೇವತಗಾಂವ್, ಡಾ. ಶಿವರಂಜನ ಸತ್ಯಂಪೇಟೆ, ಸತೀಶ ಜೇವರ್ಗಿ, ಬಸವರಾಜ ಚಿನಿವಾರ್, ಸೂರ್ಯಕಾಂತ ಜಮಾದಾರ್, ರಾಜು ದೇಶಮುಖ, ಮಹೇಶ ಕುಲಕರ್ಣಿ, ಶರಣಬಸಪ್ಪ ಜಿಡಗಾ, ಗುರುಬಸಪ್ಪ ಸಜ್ಜನಶೆಟ್ಟಿ, ಬೌದ್ಧಪ್ರಿಯ ನಾಗಸೇನ, ಮಹೇಶ ದಿವಾಕರ, ಗುಂಡುರಾವ ಅಫಜಲಪುರ, ಚಂದ್ರಶೇಖರ ಕೌಲಗಾ (ಪತ್ರಿಕೋದ್ಯಮ), ಅಕ್ರಮ ಪಾಶಾ ಮೋಮಿನ್(ಟಿವಿ ಮಾಧ್ಯಮ), ಕಲ್ಯಾಣರಾವ ಶೀಲವಂತ, ಮಲ್ಲಯ್ಯ ಗುತ್ತೇದಾರ್, ಡಾ. ಶರಣಪ್ಪ ಎಸ್. ಮಾಳಗಿ, ದತ್ತಾತ್ರೇಯ ವಿಶ್ವಕರ್ಮ, ಬಸಯ್ಯಸ್ವಾಮಿ ಗದ್ದಗಿಮಠ, ರವಿ ಹೊಸಮನಿ, ರಾಜಶೇಖರ ತಲಾರಿ, ಸಿಸ್ಟರ್ ಲಿನೆಟ್ ಸಿಕ್ವೆರಾ, ಡಾ. ಕಾಶಮ್ಮ ವೈ. ಕೋಬಾಳ (ಶಿಕ್ಷಣ ಕ್ಷೇತ್ರ), ಮುರುಳಿಧರ ಜಿ. ಕರಲಗಿಕರ್ (ಇಂಜಿನಿಯರಿಂಗ್, ಸಾಮಾಜಿಕ ಕ್ಷೇತ್ರ), ಮಲ್ಲಿಕಾರ್ಜುನ ಧೂಳಬಾ (ಕೃಷಿ ಕ್ಷೇತ್ರ), ಸಿದ್ದಣ್ಣಗೌಡ ಎಸ್. ಪಾಟೀಲ್, ಡಾ. ರವಿ ಚವ್ಹಾಣ, ಲಚ್ಚಪ್ಪ ಜಮಾದಾರ್, ಡಾ. ವಿಶಾಲಾಕ್ಷೀ. ವಿ. ಕರಡ್ಡಿ (ಸಮಾಜಸೇವೆ), ಬಿ.ಸತೀಶಕುಮಾರ, ದೇವಿಂದ್ರ ಯಡ್ರಾಮಿ, ಸೌಭಾಗ್ಯ ನೇಲೊಗಿ, (ಆಡಳಿತ ಸೇವೆ), ಶಾಂತಲಿಂಗಯ್ಯ ಮಠಪತಿ (ರಂಗಭೂಮಿ), ವಿಶ್ವನಾಥ ಶಾಸ್ರೀ, ಪೆÇ್ರ. ಮಹೇಶಕುಮಾರ ಬಡಿಗೇರ, ದತ್ತರಾಜ ಕಲ್ಲಶೆಟ್ಟಿ, ಸೂರ್ಯಕಾಂತ ಡುಮ್ಮಾ, ಜ್ಞಾನೇಶ್ವರ ಬೆಳಕೋಟಾ, ಮಹಾಂತಯ್ಯ ಮಂಠಾಳ, ಪರಶುರಾಮ ಗರೂರ, ತೇಜು ನಾಗೋಜಿ, ಶ್ರೀಶೈಲ ಕೊಂಡೆದ, ನಾಗಲಿಂಗಯ್ಯ ಸ್ಥಾವರಮಠ, ಶರಣಕುಮಾರ ದೇಸಾಯಿ ಕಲ್ಲೂರ, ಸಿದ್ದಾರ್ಥ ಚಿಮಾ ಇದ್ಲಾಯಿ,( ಸಂಗೀತ), ಅರುಣ ಕುಲಕರ್ಣಿ (ಛಾಯಾಗ್ರಾಹಕ) ಅವರಿಗೆ ಕರ್ನಾಟಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ನಂತರ ಶ್ರೀ ಶರಣಬಸವೇಶ್ವರ ಕಲಾ ಬಳಗ ಹಾಗೂ ನಾಡಿನ ಹೆಸರಾಂತ ಆಕಾಶವಾಣಿ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.