ಸಂಗೀತ ಶಿವಾನುಭವ ಜಿಲ್ಲಾ ಸಂಚಾಲಕರಾಗಿ ನಾಗಯ್ಯ ಸ್ವಾಮಿ ಅಲ್ಲೂರ ನೇಮಕ

ಚಿತ್ತಾಪುರ:ಜ.1:ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತಿನ ಸಂಗೀತ ಶಿವಾನುಭವ ಸಮಿತಿಯ ರಾಜ್ಯ ಸಂಚಾಲಕರಾದ ಹಾಸ್ಯ ಕಲಾವಿದ ಚುಟುಕು ಸಾಹಿತಿ ನವಲಿಂಗ ಪಾಟೀಲ್ ಅನುಮೋದನೆ ಮೇರಗೆ ಕಲಬುರಗಿ ಜಿಲ್ಲಾ ಸಂಚಾಲಕರಾಗಿ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧಕ್ಷರಾದ ಹಾಗೂ ಪತ್ರಕರ್ತ ನಾಗಯ್ಯ ಸ್ವಾಮಿ ಅಲ್ಲೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತಿನ ರಾಜ್ಯಧ್ಯಕ್ಷ ಚೆನ್ನವೀರ ಶಾಸ್ತ್ರೀ ಕಡಣಿ ಗದಗ ಅವರು ತಿಳಿಸಿದ್ದಾರೆ.

ಸಂಗೀತ, ಸಾಹಿತ್ಯ, ಅದ್ಯಾತ್ಮ, ಯೋಗ ಮತ್ತು ಭಾರತೀಯ ಕಲಾ ಪರಂಪರೆಯ ಸೇವೆಗಾಗಿ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಸ್ಥಾಪಿಸಿಕೊಟ್ಟ ಈ ಗಾನಯೋಗಿ ಸಂಗೀತ ಪರಿಷತ್ತಿನ ವಿನೂತನ ಕಾರ್ಯಕ್ರಮವಾದ ಸಂಗೀತ ಶಿವಾನುಭವ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲೆಯ ಎಲ್ಲ ತಾಲೂಕ ಕೇಂದ್ರದಲ್ಲಿ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದರು.

ಸಂಗೀತ, ಉಪನ್ಯಾಸ, ಮತ್ತು ಸಾಧಕರಿಗೆ ಸನ್ಮಾನ ಒಳಗೊಂಡ ಈ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಪ್ರತಿ ತಿಂಗಳು ಒಂದೊಂದು ತಾಲೂಕ ಕೇಂದ್ರದಲ್ಲಿ ಆಯೋಜಿಸುವ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.