ಸಂಗೀತ ಶಿಕ್ಷಕರ ನೇಮಕಾತಿ ಮಾಡುವಂತೆ ಶಾಸಕರಿಗೆ ಮನವಿ

ಕಲಬುರಗಿ,ಜೂ.25-ಕಳೆದ ಹನ್ನೊಂದು ವರ್ಷಗಳಿಂದ ನಡೆಯದೆ ಇರುವ ಸಂಗೀತ ಶಿಕ್ಷಕರ ನೇಮಕಾತಿ ಮಾಡುಂತೆ ಅಫಜಲಪುರ ಕ್ಷೇತ್ರದ ಶಾಸಕರಾದ ಎಮ.ವೈ ಪಾಟೀಲ್ ಅವರಿಗೆ ನವ ಕರ್ನಾಟಕ ಸಂಗೀತ ಪದವೀಧರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ, ಸಮಾಜ ಕಲ್ಯಾಣ ಇಲಾಖೆ ಕಿತ್ತೂರು ರಾಣಿ ಚೆನ್ನಮ್ಮ, ನವೋದಯ, ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ವಸತಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರನ್ನು ನೇಮಕ ಮಾಡುವಂತೆ ನವ ಕರ್ನಾಟಕ ಸಂಗೀತ ಪದವೀಧರರ ಸಂಘದ ರಾಜ್ಯ ಅಧ್ಯಕ್ಷರಾದ ಬಂಡಯ್ಯ ಹಿರೇಮಠ ಸುಂಟನೂರ ಅವರ ನೇತೃತ್ವದಲ್ಲಿ ಹಿರಿಯ ಕಲಾವಿದರಾದ ಸಿದ್ದಣ್ಣ ದೇಸಾಯಿ ಕಲ್ಲೂರ,ನಾಗಲಿಂಗ್ಯ ಸ್ಧಾವರಮಠ, ಅಂಬರೀಶ ಹೂಗಾರ, ಚನ್ನಬಸವ ಬೊಮ್ಮಣ್ಣಿ, ಶರಣಬಸವ ಹಾವನೂರ, ಸಿದ್ದಾರೂಢ ಅವರಳ್ಳಿ ಸೇರಿದಂತೆ ಅನೇಕ ಪದವೀಧರರ ಸಮ್ಮುಖದಲ್ಲಿ ನಗರದ ಕನ್ನಡ ಭವನದಕ್ಕೆ ಆಗಮಿಸಿದ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಈ ವಿಷಯ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಆಶ್ವಾಸನೆ ನೀಡಿದರು.