ಕಲಬುರಗಿ,ಜು 21:ನವ ಕರ್ನಾಟಕ ಸಂಗೀತ ಪದವೀಧರರ ಸಂಘದ ನಿಯೋಗ ಬೆಂಗಳೂರಿನ ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪರನ್ನು ಭೇಟಿ ಮಾಡಿ ಸಂಗೀತ ಶಿಕ್ಷಕರ ನೇಮಕಾತಿಗೆ ಮನವಿ ಸಲ್ಲಿಸಿತು.
ಕಳೆದ 2011ರ ನೇಮಕಾತಿ ಪ್ರಕ್ರಿಯೆಯಲ್ಲಿ ಬಾಕಿ ಉಳಿದ 246ಕ್ಕೂ ಹೆಚ್ಚು ಹುದ್ದೆಗಳು ಮತ್ತು ಹನ್ನೆರಡು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ನಡೆದಿಲ್ಲ ಮೊರಾರ್ಜಿ ದೇಸಾಯಿ . ಏಕಲವ್ಯ ಅಂಬೇಡ್ಕರ. ರಾಜೀವ ಗಾಂಧಿ. ಕಿತ್ತೂರು ರಾಣಿ ಚೆನ್ನಮ್ಮ. ಅಟಲ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು ಈಗಾಗಲೇ ಅನೇಕ ಪದವೀಧರ ವಯೋಮಾನ ಮೀರುತ್ತಿರುವುದರಿಂದ ಸಂಗೀತ ಪದವೀಧರರ ಬದುಕು ದುಸ್ತರವಾಗಿದೆ ಎಂದು ಸಚಿವರಿಗೆ ಭೇಟಿಯಾದ ನವ ಕರ್ನಾಟಕ ಸಂಗೀತ ಪದವೀಧರರ ಸಂಘದ ರಾಜ್ಯ ಅಧ್ಯಕ್ಷ ಕಲಬುರ್ಗಿಯ ಬಂಡಯ್ಯ ಹಿರೇಮಠ ಸುಂಟನೂರ, ಶರಣ ಕುಮಾರ ಯಾಳಗಿ,ಸುರೇಶ ಪಾಟೀಲ, ರಮೇಶ ಭಜಂತ್ರಿ, ಶಂಕರಯ್ಯ ಸ್ವಾಮಿ, ಅಣ್ಣರಾವ ಮತ್ತಿಮಡು, ಮೈಲಾರಪ್ಪ ರಾಯಬಾಗ,ಯಮನೂರಪ್ಪ ಹೂಗಾರ,ಅಂಬರೀಶ ಸಾಲಿಮಠ ಮನವಿ ಸಲ್ಲಿಸಿದರು.