ಸಂಗೀತ ವಿವಿಯಲ್ಲಿ ಸಾಂಸ್ಕೃತಿಕ ಉತ್ಸವದ ಮೆರುಗು

ಸಂಜೆವಾಣಿ ನ್ಯೂಸ್
ಮೈಸೂರು: ಮಾ.06:- ಸಂಗೀತ ಸಾಮ್ರಾಜ್ಞೆ, ಪದ ವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರ 111ನೇ ಜನದಿನೋತ್ಸವವನ್ನು ಸಾಂಸ್ಕೃತಿಕ ಉತ್ಸವದೊಂದಿಗೆ ಮಂಗಳವಾರ ವೈಭವದಿಂದ ಆಚರಿಸಲಾಯಿತು.
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ಸಂಗೀತ, ನೃತ್ಯ ಪ್ರಕಾರಗಳ ಪ್ರದರ್ಶನದೊಂದಿಗೆ ಹಿರಿಯ ಚೇತನಕ್ಕೆ ಗೌರವ ಸಮರ್ಪಿಸಲಾಯಿತು.
ಇದೇ ವೇಳೆ ಮೈಸೂರು ಅಂಚೆ ಇಲಾಖೆ ರೂಪಿಸಿರುವ ವಿಶೇಷ ಅಂಚೆಲಕೋಟೆಯನ್ನು ಲೋಕಾರ್ಪಣೆ ಮಾಡಲಾಯಿತು.
ಡೊಳ್ಳು ಕುಣಿತ, ನಗಾರಿ, ಪೂಜಾ ಕುಣಿತ ಕಲಾ ತಂಡಗಳ ಮೆರವಣಿಗೆಗೆ ಮುಡಾ ಅಧ್ಯಕ್ಷ ಕೆ. ಮರೀಗೌಡ ಚಾಲನೆ ನೀಡಿದರು. ಕಲಾತಂಡಗಳ ಮೆರವಣಿಗೆಯೂ ಬಲ್ಲಾಳ್ ವೃತ್ತ, ಆರ್‍ಟಿಓ ವೃತ್ತ ಮತ್ತು ರಾಮಸ್ವಾಮಿ ವೃತ್ತಗಳಲ್ಲಿ ಸಾಗಿತು. ಮಧ್ಯಾಹ್ನ ಸಂಗೀತ ಕಛೇರಿ ನಡೆಯಿತು.
ಕಲೆ ದೈವದತ್ತವಾದದ್ದು: ಜಾನಪದ, ಶಾಸ್ತ್ರೀಯ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದು ದೈವದತ್ತವಾದದ್ದು. ಸಮಯವನ್ನು ಜಾಗ್ರತೆಯಿಂದ ಬಳಸಿದರೆ, ಶ್ರದ್ಧೆಯಿದ್ದರೆ ಸಾಧಿಸಬಹುದು ಎಂದು ಹಿರಿಯ ಜಾನಪದ ಗಾಯಕ ಡಾ. ಮಳವಳ್ಳಿ ಮಹದೇವಸ್ವಾಮಿ ಹೇಳಿದರು.
ಹಾಡುಗಾರಿಕೆ, ಸಿನಿಮಾ, ಹಾರೋನಿಯಂ ಗೀಳು ಬೆಳೆಸಿಕೊಂಡಿದ್ದ ನಾನು ಅಕ್ಷರ ಕಲಿಯುವುದಿಲ್ಲವೆಂದು ಜೋಳಿಗೆ ಹಾಕೊಂಡು ಭೀಕ್ಷೆ ಬೇಡಿದರೆ ರಾಗಿ, ಭತ್ತ ಸಿಗುತ್ತದೆ. ಮಧ್ಯಾಹ್ನ ಯಾರಾದರೂ ಊಟ ಕೊಡುವರೆಂದು ನಮ ತಂದೆಯವರು ಕಂಸಾಳೆ ಪದ ಕಲಿಕೆಗೆ ಸೇರಿಸಿದರು. ತುಂಬ ಬಡತನದಲ್ಲಿ ಬೆಳೆದವು. ಜಾನಪದ ಕಲೆ ನಮನ್ನು ಕಾಪಾಡಿತು ಎಂದರು.
ಆಲಂಬಾಡಿ ಜುಂಜೇಗೌಡ ಕತೆ: ಈವರೆಗೆ 20 ಕತೆಗಳನ್ನು ಹೇಳಿದ್ದೇನೆ. ಈಚೆಗೆ ಯೂಟ್ಯೂಬ್‍ನಲ್ಲಿ ಮಲೆಯ ಮಹದೇಶ್ವರ ಸ್ವಾಮಿಗೆ ದೇವಸ್ಥಾನ ಕಟ್ಟಿಸಿದ ಆಲಂಬಾಡಿ ಜುಂಜೇಗೌಡರ ಕತೆಯನ್ನು ಹಾಡಿದ್ದೇನೆ. ಇನ್ನೂ 20 ಕತೆಗಳನ್ನು ಹಾಡಲಿರುವೆ ಎಂದು ವಿವರಿಸಿದರು.
ಕುಲಪತಿ ಪೆÇ್ರ.ನಾಗೇಶ್ ವಿ.ಬೆಟ್ಟಕೋಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಮುಡಾಗೆ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಯುತವಾಗಿ ಬರಬೇಕಾದ್ದು ಬರುವುದರಲ್ಲಿಯೇ ಇದೆ. ಈಗ ಅಧ್ಯಕ್ಷರಾಗಿರುವ ಕೆ. ಮರೀಗೌಡ ಅವರು ನಿವೇಶನ ಕೊಡಿಸುವ ಭರವಸೆ ಇದೆ ಎಂದು ಹೇಳಿದರು.
ಪರೀಕ್ಷಾಂಗ ಕುಲಸಚಿವ ಪೆÇ್ರ.ಕೆ.ಎಂ. ಮಹದೇವನ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಪ್ರಸನ್ನ ಮುಂತಾದವರು ಇದ್ದರು.