ಸಂಗೀತ ವಿದ್ವಾನ್ ವಿ.ನಟರಾಜ್ ನಿಧನ

ಮೈಸೂರು, ಡಿ:25: ಮೈಸೂರಿನ ಕುಂಬಾರಗೇರಿ ಬಡಾವಣೆ ನಿವಾಸಿ ಸಂಗೀತ ವಿದ್ವಾನ್ ವಿ.ನಟರಾಜ್ (84) ನಿನ್ನೆ ರಾತ್ರಿ 11 ಗಂಟೆಗೆ ನಿಧನರಾದರು.
ಮೃತರು ಪತ್ನಿ 5 ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.