ಸಂಗೀತ ವಿದ್ವಾನ್ ತಿಪ್ಪೇಸ್ವಾಮಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ


ಹಿರಿಯೂರು.ಅ.೨೯: ಹಿರಿಯೂರಿನ ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಪ್ರಾಂಶುಪಾಲರಾದ ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿಯವರು ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಮಕ್ಕಳಿಗೆ ಸಂಗೀತ ವಿದ್ಯಾದಾನ ನೀಡುತ್ತಾ ಬಂದಿದ್ದಾರೆ. ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ತುಂಬಾ ಸಂತೋಷದ ವಿಚಾರ ಎಂದು ಸಾಹಿತಿ ಎಂ.ಕಿರಣ್‌ಮಿರಜ್ಕರ್ ಹೇಳಿದರು. ರಾಜ್ಯೋತ್ಸವ ಪ್ರಶಸ್ತಿಗೆ ತಿಪ್ಪೇಸ್ವಾಮಿಯವರು ಆಯ್ಕೆಯಾಗಿರುವುದರಿಂದ ಆತ್ಮೀಯವಾಗಿ ಸನ್ಮಾನಿಸಿ ಅವರು ಮಾತನಾಡಿದರು. ತಿಪ್ಪೇಸ್ವಾಮಿಯವರು ಮೂಲತಹಾ ರಂಗಕರ್ಮಿಗಳ ಕಟುಂಬದಿಂದ ಬಂದಿದ್ದು ಉತ್ತಮ ಕಲಾವಿದರಾಗಿದ್ದಾರೆ. ಶ್ರೀ ಏಕನಾಥೇಶ್ವರಿ ಸಂಗೀತ ಶಾಲೆಯ ಮೂಲಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಜೊತೆ ಸೇವೆ ಸಲ್ಲಿಸುವ ಮೂಲಕ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳು ಮತ್ತು ಪ್ರತೀ ವರ್ಷ ದಾಸರ ಆರಾಧನೆ, ಸಂಗೀತೋತ್ಸವ ಕಾರ್ಯಕ್ರಮ ಸಹಾ ನಡೆಸುತ್ತಾ ಬಂದಿದ್ದಾರೆ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ ಇವರಿಗೆ ದೇವರು ಆಯುರಾರೋಗ್ಯ ನೀಡಲಿ ಎಂದು ಹೇಳಿದರು. ಸನ್ಮಾನ ಸ್ಮೀಕರಿಸಿದ ತಿಪ್ಪೇಸ್ವಾಮಿಯವರು ಮಾತನಾಡಿ ನಾನು ಯಾವುದೇ ಪ್ರಶಸ್ತಿಯ ನಿರೀಕ್ಷೆ ಮಾಡಿರಲಿಲ್ಲ ಸಂಗೀತದಿಂದ ಉತ್ತಮ ಸಂಸ್ಕಾರ ಮೂಡಿ ಬರುತ್ತದೆ ಮಕ್ಕಳು ಸಂಗೀತ ಕಲಿಯುವುದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂಬ ಉದ್ದೇಶದಿಂದ ಸಂಗೀತ ಶಾಲೆಯ ಮೂಲಕ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಂ.ರವೀಂದ್ರನಾಥ್, ಚಿನ್ನದ ಪದಕ ಪುರಸ್ಕೃತರಾದ ಎಂ.ಆರ್. ಅಮೃತಲಕ್ಷ್ಮಿ, ಬಸವರಾಜ್, ಲಕ್ಷ್ಮೀದೇವಿ, ಜಗದಂಬಾ, ಬಿಂದು, ವಿನುತ, ಭೂಮಿಕ ಹಾಗೂ ತಿಪ್ಪೇಸ್ವಾಮಿಯವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ಪೋಟೋ-೧೭