ಸಂಗೀತ ಲೋಕದಲ್ಲಿ ಮಿಂದೆದ್ದ ಬೀದರ ಜನತೆ

ಬೀದರ ಜ.9: ಬೀದರ ಉತ್ಸವ-2023ರ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳು ರವಿವಾರ ಸಂಜೆ ಬೀದರ ಕೋಟೆಯ ಆವರಣದ ಮುಖ್ಯ ವೇದಿಕೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಾದ ಕಥಾ ಕೀರ್ತನ, ಸುಗಮ ಸಂಗೀತ, ಜಾನಪದ ಮತ್ತು ಸಂಸ್ಕøತಿ ಮಂತ್ರಾಲಯ ನವದೆಹಲಿ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ, ಭಾರತ ಸರ್ಕಾರ ತಂಜಾವೂರು ಪ್ರಾಯೋಜಿತ ರಾಷ್ಟ್ರ ಮಟ್ಟದ ಜಾನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ ಹಾಗೂ ಪಂಜಾಬ ಗುರುದರಹನ್ ಸಿಂಗ್ ಮಲ್ವಾ ಸಭ್ಯಾಚರಕ ಕ್ಲಬ್ ಪಟಿಯಾಲಾ ಅವರಿಂದ ಪಂಜಾಬಿ ಭಾಂಗಡಾ ಡ್ಯಾನ್ಸ್ ಕಲಾವಿದರು ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಬೀದರ ಜನತೆಯ ಮಂತ್ರ ಮುಗ್ಧರನ್ನಾಗಿಸಿದರು.

ಸುರಭಿ ಕಾಳಿದಾಸ ಮನಸಾಳೆ ಮುಂಬಯಿ ಅವರಿಂದ ಮಹಾರಾಷ್ಟ್ರ ಲಾವಣಿ ನೃತ್ಯ ಕಲಾವಿದರ ವೈವಿದ್ಯತೆಯಿಂದ ಕೂಡಿತ್ತು. ಈ ಉತ್ಸವದಲ್ಲಿ ಲಕ್ಷಾಂತರ ಜನರು ಸಂಗೀತ ಕಲೆ ಆನಂದವನ್ನು ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೇ ಶಿಳ್ಳೆ, ಚಿತ್ತಾರಗಳು ಹಾಕುವ ಮೂಲಕ ಉತ್ಸವದ ಆನಂದ, ಸಂತೋಷ, ಹರ್ಷೋದ್ಘಾರಗಳನ್ನು ವ್ಯಕ್ತಪಡಿಸಿದರು.