ಸಂಗೀತ ಮಾನವ ಅವಿಭಾಜ್ಯ ಅಂಗ-ಜ್ಞಾನಮೂರ್ತಿ

ಕೋಲಾರ, ಜ.೨- ಹಾದಿಯಲ್ಲಿ ವಿಶ್ವಮಾನವ ವಿಶ್ವ ಜ್ಯೋತಿ ಬಸವ ಬಳಗದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ತಮಟೆ ವಾದನ, ನಾದಸ್ವರ, ನೃತ್ಯ ಹೀಗೆ ಕೋಟೆ ಕೋಟಿ ಜಪ ಮಾಡಬೇಕಾಗಿಲ್ಲ. ಸ್ವಲ್ಪ ಸಂಗೀತವನ್ನು ಹಾಡಿದರೆ ಸಾಕು ಕೋಟ್ಯಾನುಕೋಟಿ ಜಪಕ್ಕೆ ಸಮ ಎಂದು ಬಸವಣ್ಣನವರು ನುಡಿದಿದ್ದಾರೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯರೂ ಹಾಗೂ ಕುಮಾರವ್ಯಾಸ ಪ್ರಶಸ್ತಿ ವಿಜೇತ ಎನ್.ಆರ್ ಜ್ಞಾನಮೂರ್ತಿ ಹೇಳಿದರು.
ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಹಾಗು ಬಸವ ಸಮಿತಿ ಬೆಮೆಲ್ ನಗರ ಕೆ.ಎಜಿ.ಎಫ್ ಇವರ ಸಂಯುಕ್ತಾಶ್ರಯದಲ್ಲಿ ದಿನಂಕ ೨೮-೧೨-೨೦೨೦ ರಂದು ರ್ಶರೀ ಬಸವ ಸಾಂಸ್ಕೃತಿಕ ಭವನ ಸರ್.ಎಂ.ವಿ ನಗರ ಬೆಮೆಲ್ ನಗರ ಕೆ.ಜಿ.ಎಫ್‌ನಲ್ಲಿ ಹಮ್ಮಿಕೊಂಡಿದ್ದ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮತನಾಡಿದರು.
ಯಾರು ಸಂಗೀತವನ್ನು ಹಾಡುತ್ತಾರೋ ಅವರು ಪುಣ್ಯವಂತರು. ಅದರಲ್ಲಿ ವಿಶೇಷವಾಗಿ ಕೋಲಾರ ಜಿಲ್ಲೆ ಕರ್ನಾಟಕದಲ್ಲಿ ಸಂಗೀತ ಮತ್ತು ಸಾಹಿತ್ಯವನ್ನು ನೀಡಿದ ಜಿಲ್ಲೆ ಕೋಲಾರ ಜಿಲ್ಲೆ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಮುಳಬಾಗಿಲಿನ ಡಿ.ವಿ ಗುಂಡಪ್ಪ, ಹೊಳಲಿ ಸುಬ್ರಮಣ್ಯಂಶಾಸ್ತ್ರಿ, ಕೋಲಾರ ಕಿಟ್ಟಪ್ಪ ಹೀಗೆ ಅನೇಕರು ಕೋಲಾರ ಜಿಲ್ಲೆಗೆ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ ಎಂದರು.
ಬಾ.ಹಾ ಶೇಖರಪ್ಪ ಮಾತನಾಡಿ, ನಮ್ಮ ರಾಜ್ಯದಲ್ಲಿ ಜನಪದ ಕಲೆ ವಿಶಿಷ್ಟತೆಯನ್ನು ಪಡೆದಿದೆ. ವಿವಿಧ ಜಿಲ್ಲೆಗಳ ಜನಪದ ಕಲೆಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಯುವ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕೆಂದು ಮನವಿ ಮಾಡಿದರು.
ಪ್ರಾಸ್ತಾವಿಕ ನುಡಿಗಳನ್ನು ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ.ರವಿಕುಮಾರ್ ನುಡಿದರು. ಕಾರ್ಯಕ್ರಮದಲ್ಲಿ ಕನ್ನಡಮಿತ್ರರು ಉಪಾಧ್ಯಕ್ಷ ವಿರೂಪಾಕ್ಷಪ್ಪ ಕುಲಕರ್ಣಿ, ಪ್ರಧಾನ ವ್ಯವಸ್ಥಾಪಕ ಹಾಗೂ ಬಸವ ಸಮಿತಿ ಅಧ್ಯಕ್ಷ ಎಂ.ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ವಿ.ಬಿ ದೇಶಪಾಂಡೆ, ಬೇತಮಂಗಲ ರಮೇಶ್ ಉಪಸ್ಥಿತರಿದ್ದರು.