ಸಂಗೀತ ದಿಂದ ಮಾನಸಿಕ ನೆಮ್ಮದಿ’

ಕೊಟ್ಟೂರು ಜ 0 7: ಸುಗಮ ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪ್ರತಿಯೊಬ್ಬರೂ ಸಂಗೀತ ಕೇಳುವುದನ್ನು ರೂಢಿಸಿಕೊಳ್ಳಬೇಕು’ ಎಂದು ಆಕಾಶವಾಣಿ ಕಲಾವಿದ ಪ್ರಾಣಲಿಂಗಸ್ವಾಮಿ ಸಲಹೆ ನೀಡಿದರು.
ಪಟ್ಟಣದ ಗಚ್ಚಿನಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಂಬೂರು ಕುಮಾರಸ್ವಾಮಿ ಸಹಯೋಗದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರ್.ಎಂ.ಗುರುಸ್ವಾಮಿ, ಕೂಡ್ಲಿಗಿ ಮುದುಕಪ್ಪ ಸೇರಿದಂತೆ ಆನೇಕರಿದ್ದರು.