ಸಂಗೀತ ಕ್ಷೇತ್ರದ ಮೂಲಕ ನಾಡಿನ ಕೀರ್ತಿ ಹೆಚ್ಚಿಸಿದ ಭೀಮಸೇನ ಜೋಶಿ

ಕಲಬುರಗಿ:ಫೆ.4: ಸಂಗೀತವೇ ತಮ್ಮ ಉಸಿರಾಗಿಸಿಕೊಂಡಿದ್ದ ಪಂಡಿತ ಭೀಮಸೇನ ಜೋಶಿ, ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದೂಸ್ಥಾನಿ ಗಾಯಕರಾಗಿದ್ದಾರೆ. ಕಿರಾಣಾ ಘರಾನಾದಲ್ಲಿ ಸಾಧಿಸಿದ ಪರಿಣಿತಿ ಸ್ಮರಣೀಯವಾದದ್ದು. ಅವರು ಸಂಗೀತ ಕ್ಷೇತ್ರದ ಅನಘ್ರ್ಯ ರತ್ನವಾಗಿದ್ದಾರೆ. ನಮ್ಮ ನಾಡಿನ ಕೀರ್ತಿಯನ್ನು ವಿಶ್ವಕ್ಕೆ ಪಸರಿಸಿದ ಸಂಗೀತದ ಅಮೋಘ ರತ್ನ ಅವರಾಗಿದ್ದಾರೆಂದು ಹವ್ಯಾಸಿ ಗಾಯಕ ಬಸಯ್ಯಸ್ವಾಮಿ ಹೊದಲೂರ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದದಲ್ಲಿರುವ ‘ಸಕ್ಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಭಾನುವಾರ ಜರುಗಿದ ‘ಪಂಡಿತ ಭೀಮಸೇನ ಜೋಶಿ ಅವರ 102ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಸೋಹೆಲ್ ಶೇಖ್ ಸೇರಿದಂತೆ ಮತ್ತಿತರರಿದ್ದರು.