ಸಂಗೀತ ಕ್ಷೇತ್ರದಲ್ಲಿ ಗುರು ಶಿಷ್ಯರ ಸಂಬಂಧ ಅನೋನ್ಯ

ಭಾಲ್ಕಿ:ನ.17: ಸಂಗೀತ ಕ್ಷೇತ್ರದಲ್ಲಿಯ ಗುರು ಶಿಷ್ಯರ ಸಂಬಂಧ ಅವಿಸ್ಮರಣೀಯವಾಗಿದೆ ಎಂದು ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಕುಂಬಾರ ಗುಂಡಯ್ಯಾ ಕಲ್ಯಾಣ ಮಂಟಪದಲ್ಲಿ ನಾದಬ್ರಹ್ಮ ಸಂಗೀತ ಸಮಿತಿಯ ವತಿಯಿಂದ ನಡೆದ ಸಂಗೀತ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕøತಿಯಲ್ಲಿ ಗುರು ಶಿಷ್ಯರ ಸಂಬಂಧ ಎಲ್ಲಾ ವಿಬಗದಲ್ಲಿಯೂ ನಶಿಸಿ ಹೋಗಿದೆ. ಆದರೆ ಈ ಸಂಬಂಧ ಸಂಗೀತ ಕ್ಷೇತ್ರದಲ್ಲಿ ಮಾತ್ರ ಜೀವಂತವಿದೆ. ಗುರುಶಿಷ್ಯರ ಸಂಬಂಧ ಅತ್ಯಂತ ಗಟ್ಟಿಯಾಗಿರುತ್ತದೆ.ಸಂಗೀತ ಪ್ರೇಮಿಗಳು ಸಂಗೀತ ಕಲಾವಿದರನ್ನು ಸಹಕರಿಸಿ,ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್ ತಾಲೂಕು ಸಂಚಾಲಕ ಶಿವು ಲೋಖಂಡೆ,ಇಂದಿನ ಯಾಂತ್ರಿಕ ಜೀವನದಲ್ಲಿ ಸಂಗೀತ ಆಲಿಸುವುದು ಅಗತ್ಯವಾಗಿದೆ.ಎಲ್ಲರಿಗೂ ಸಂಗೀತದ ಸವಿಯನ್ನು ಉಣಬಡಿಸಿದ ನಾದಬ್ರಹ್ಮ ಸಂಗೀತ ಸಮಿತಿಯ ಸಂಯೋಜಕ ಶಿವಾಜಿ ಸಗರ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಯುವ ನಾಯಕ ಸಾಗರ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಿದರು.
ಸನ್ಮಾನ: ಇದೇವೇಳೆ ಮಧ್ಯಪ್ರದೇಶದ ಕಲಾವಿದೆ ಪ್ರೀತಿ ಸಿಂಗ್, ಮಧ್ಯಪ್ರದೇಶ, ಭೂಪಾಲ, ಮುಂಬೈ ಕಲಾವಿದರಿಗೆ ಔರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಲ್ಯಾಣರಾವ ಕುಲಕರ್ಣಿ,ಲೋಕೋಪಯೋಗಿ ಇಲಾಖೆಯ ಎಇಇ ಶಿವಶಂಕರ ಕಾಮಶೆಟ್ಟಿ, ಡಾ| ಅನೀಲ ಸುಕಾಳೆ, ಸಲೀಮೋದಿನ್ ಚೌಧ್ರಿ, ಬಾಲಾಜಿ ಕಾಂಬಳೆ, ರಾಜೇಶ ಪಾಟೀಲ, ಸಿದ್ರಾಮಪ್ಪ ವಂಕೆ, ಧನರಾಜ ಸೊನಾಳೆ, ಶ್ರೀರಂಗ ಗಾಜರೆ ಪಾಂಡ್ರಿ,ಹಣಮಂತಪ್ಪ ಚದ್ರಿ, ಕೇಶವರಾವ ಸೂರ್ಯವಂಶಿ, ಉಸ್ತಾದ ಹನ್ನುಮಿಯ್ಯಾ ಉಪಸ್ತಿತರಿದ್ದರು.
ಕಾರ್ಯಕ್ರಮದ ಸಂಯೋಜಕ ಶಿವಾಜಿ ಸಗರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಕಪಿಲ ಸೂರ್ಯವಂಶಿ ವಂದಿಸಿದರು.