ಸಂಗೀತ ಕ್ಷೇತ್ರಕ್ಕೆ ಲತಾ ಮಂಗೇಶ್ಕರ ಕೊಡುಗೆ ಅನನ್ಯ

ಕಲಬುರಗಿ:ಫೆ.06: ಲತಾ ಮಂಗೇಶ್ಕರ ಅವರು ‘ಭಾರತದ ಗಾನಕೋಗಿಲೆ’ ಎಂದು ಪ್ರಸಿದ್ದರಾಗಿದ್ದಾರೆ. ತಮ್ಮ ಹದಮೂರನೇ ವಯಸ್ಸಿನಲ್ಲಿಯೇ ಹಿನ್ನಲೆ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಅವರು, ಮೂವತ್ತು ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗದ್ದವರು. ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನಯವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಜೆ.ಆರ್ ನಗರದ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ಲತಾ ಮಂಗೇಶ್ಕರ ಅವರ ದ್ವಿತೀಯ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಂಗೇಶ್ಕರ ಅವರು ಮೂವತ್ತಾರು ಭಾರತೀಯ ಭಾಷೆಗಳು ಮತ್ತು ಕೆಲವು ವಿದೇಶಿ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಫಿಲ್ಮಫೇರ್ ಅವಾರ್ಡ್, ಪದ್ಮವಿಭೂಷಣ, ಭಾರತರತ್ನ ಸೇರಿದಂತೆ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಂಗೀತದ ಬಗ್ಗೆ ಅವರಿಗಿರುವ ಸಂಗೀತದ ಆಸಕ್ತಿ, ಭಕ್ತಿ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸಂಸ್ಥೆಯ ಸಿಬ್ಬಂದಿ ಸೋಹೆಲ್ ಶೇಖ್ ಸೇರಿದಂತೆ ಮತ್ತಿತರರಿದ್ದರು.