ಸಂಗೀತ ಕ್ಷೇತ್ರಕ್ಕೆ ಧಾರವಾಡದ ಕೊಡುಗೆ ಅನನ್ಯ


ಧಾರವಾಡ,ಜೂ.8: ಭಾರತಕ್ಕೆ, ಸಂಗೀತಕ್ಷೇತ್ರಕ್ಕೆಧಾರವಾಡದಕೊಡುಗೆಅನನ್ಯವಾಗಿದೆ. ಸಂಗೀತದ ಶಿಷ್ಯ ಪರಂಪರೆಯನ್ನು ಹೊಂದಿದಖ್ಯಾತಿಧಾರವಾಡಕ್ಕಿದೆಎಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದಡಾ. ಹಣಮಂತರಾವ ಡಂಬಳ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ಡಾ. ಶ್ರೀಮತಿ ಸುಲಭಾದತ್ತ ನೀರಲಗಿದತ್ತಿಕಾರ್ಯಕ್ರಮದಲ್ಲಿಅತಿಥಿಯಾಗಿಮಾತನಾಡಿದರು.
ಸಂಗೀತಕ್ಷೇತ್ರದಲ್ಲಿ ಶಿಷ್ಯರನ್ನು ಖ್ಯಾತ ಸಂಗೀತಗಾರರನ್ನಾಗಿರೂಪಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಗಂಗೂಬಾಯಿ ಹಾನಗಲ್ಲಅವರು ಶಿಷ್ಯರನ್ನು ರೂಪಿಸಿ ಆ ಶಿಷ್ಯ ಪರಂಪರೆ ಮುಂದುವರಿಸಿದ್ದಾರೆ.ಈಗಿನ ಸಂದರ್ಭದಲ್ಲಿ ಕ್ಲಾಸಿಕಲ್ ಸಂಗೀತವನ್ನು ಉಳಿಸಿಕೊಳ್ಳುವುದು ಸುಲಭವಲ್ಲಎಂದುಅಭಿಪ್ರಾಯಪಟ್ಟರು.
ಇನ್ನೋರ್ವಅತಿಥಿಖ್ಯಾತ ಹಿಂದೂಸ್ಥಾನಿ ಸಂಗೀತಕಲಾವಿದರಾದ ಪಂ.ಶಾಂತಾರಾಮ ಹೆಗಡೆಅವರು ಮಾತನಾಡಿ, ಗಂಗೂಬಾಯಿ ಹಾನಗಲ್, ಸುಲಭದತ್ತಅವರ ಸಂಗೀತ ಸೇವೆಯನ್ನು ಸ್ಮರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಸಂಗೀತಕಲಾವಿದರು ಹಾಗೂ ಪದ್ಮಶ್ರೀ ಎಂ.ವೆಂಕಟೇಶಕುಮಾರಅವರುತಾಯಿ-ತಂದೆಯರ ನಿಜವಾದ ಸೇವೆ ಮಾಡುವವರೆಂದರೆ ಹೆಣ್ಣು ಮಕ್ಕಳು.ಇದುಎಲ್ಲಾತಾಯಿ-ತಂದೆಯವರಅನುಭವವೂ ಹೌದು.ಈ ದೃಷ್ಟಿಯಿಂದ ಸುಲಭದತ್ತಅವರುತಮ್ಮ ಹೆಣ್ಣು ಮಕ್ಕಳನ್ನು ಸಂಗೀತಗಾರರನ್ನಾಗಿ ಮಾಡಿದ್ದಾರೆ.ತಮ್ಮ ಹುಟ್ಟು ಹಬ್ಬವನ್ನುತಮ್ಮ ಗುರುಗಳಾದ ಗಂಗೂಬಾಯಿ ಹಾನಗಲ್‍ಅವರ ಹೆಸರಿನ ಸಂಗೀತ ಸ್ಮರಣೋತ್ಸವ ಮಾಡುತ್ತಿರುವುದು ಶ್ಲಾಘನೀಯಎಂದರು.
ವೇದಿಕೆ ಮೇಲೆ ಚಂದ್ರಶೇಖರ ನಾಡಿಗೇರಇದ್ದರು.ಪಂ.ಶಫಿಕ್‍ಖಾನ್ ಮತ್ತು ಪಂ.ಶಾಂತಾರಾಮ ಹೆಗಡೆ ಸಂಗೀತ ಸಂಜೆಕಾರ್ಯಕ್ರಮ ನಡೆಸಿಕೊಟ್ಟರು.ಇವರಿಗೆತಬಲಾ ಸಾಥ್ ಪಂ.ಅಲ್ಲಮಪ್ರಭು ಕಡಕೋಳ ಮತ್ತು ಪಂ.ನಿಸಾರಅಹ್ಮದ್ ನೀಡಿದರೆ, ಹಾರ್ಮೋನಿಯಂ ಸಾಥ ಪಂ.ಪರಶುರಾಮಕಟ್ಟಿ ಸಂಗಾವಿ ನೀಡಿದರು.
ಪ್ರಾರಂಭದಲ್ಲಿ ಕಲಾಶ್ರೀ ಸಂಗೀತ ಸಭಾ ವಿದ್ಯಾರ್ಥಿಗಳಿಂದ ಪ್ರಾರ್ಥನೆಜರುಗಿತು. ಡಾ. ಧನವಂತ ಹಾಜವಗೋಳ ಸ್ವಾಗತಿಸಿ, ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀಮತಿ ಮಾಯಾಚಿಕ್ಕೇರೂರಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಶೈಲಜಾಅಮರಶೆಟ್ಟಿ, ಗುರು ಹಿರೇಮಠ, ಎಸ್.ಬಿ. ಗುತ್ತಲ, ದತ್ತಿ ನೀರಲಗಿ ಸೇರಿದಂತೆಅನೇಕರು ಭಾಗವಹಿಸಿದ್ದರು.