
ಕಲಬುರಗಿ,ಜು.21:ವ್ಯಕ್ತಿಯಲ್ಲಿ ದೈಹಿಕ ಬದಲಾವಣೆಯೊಂದಿಗೆ ಮಾನಸಿಕ ಶಾಂತಿ ನೀಡುವ ಶಕ್ತಿ ಸಂಗೀತಕ್ಕಿದೆ. ಇಂದಿನ ಒತ್ತಡದ ಬದುಕಿನ ತೊಂದರೆಗೆ ಸಂಗೀತ ಆಲಿಸುವುದು ಅಗತ್ಯವಾಗಿದೆ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಇಡೀ ತಮ್ಮ ಜೀವನದುದ್ದಕ್ಕೂ ಸೇವೆಯನ್ನು ಸಲ್ಲಿಸಿ ನಮ್ಮ ನಾಡು ಹಾಗೂ ದೇಶದ ಕೀರ್ತಿಯನ್ನು ವಿಶ್ವವ್ಯಾಪಿ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ ಗಂಗೂಬಾಯಿ ಹಾನಗಲ್ ಅವರ ಕೊಡುಗೆ ಅಪಾರವಾಗಿದೆ ಎಂದು ಸಂಗೀತ ಕಲಾವಿದ ಎಸ್.ಬಿ.ಹರಿಕೃಷ್ಣ ಹೇಳಿದರು.
ನಗರದ ಸಿದ್ದಾರ್ಥ ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಅಂತರಂಗ ಸಾಂಸ್ಕøತಿಕ ಸೇವಾ ಸಂಸ್ಥೆ’ ಇವುಗಳ ವತಿಯಿಂದ ಶುಕ್ರವಾರ ಜರುಗಿದ ‘ಗಂಗೂಬಾಯಿ ಹಾನಗಲ್ ಪುಣ್ಯಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಗುವಿವಿ ಸಂಗೀತ ಅತಿಥಿ ಉಪನ್ಯಾಸಕಿ ಲಲಿತಾ ಹರಿಕೃಷ್ಣ ಮಾತನಾಡಿ, “ನನಗೆ ಸಂಗೀತವೇ ದೇವರು. ಆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂದು ನಿರಂತರವಾಗಿ ಸಂಗೀತ ಅಭ್ಯಾಸ, ಸೇವೆಯನ್ನು ಮಾಡಿತ್ತೇನೆ” ಎಂಬ ಗಂಗೂಬಾಯಿ ಹಾನಗಲ ಅವರ ಮಾತು ಸಂಗೀತಕ್ಕೆ ಸಂಬಂಧಿಸಿದಂತೆ ಅವಿಸ್ಮರಣೀಯವಾಗಿದೆ. ಬೆಳಗಾಂವ ಕಾಂಗ್ರೆಸ್ ಅಧಿವೇಶನದಲ್ಲಿ ಇವರು ಬಾಲ್ಯದಲ್ಲಿರುವಾಗಲೇ ಸುಮಧುರವಾಗಿ ಹಾಡುವ ಮೂಲಕ ಗಾಂಧೀಜಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಪದ್ಮಭೂಷಣ ಪ್ರಶಸ್ತಿ ಸೇರಿ ಅನೇಕ ಗೌರವಕ್ಕೆ ಪಾತ್ರರಾಗಿದ್ದಾರೆ. ಮೂಲತಃ ಕನ್ನಡಿಗರಾಗಿ, ಸಂಗೀತ ಕ್ಷೇತ್ರದ ಮೂಲಕ ನಮ್ಮ ನಾಡಿನ ಕೀರ್ತಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಜಿಲ್ಲಾ ಯುವ ಬ್ರಿಗೇಡ್ ಅಧ್ಯಕ್ಷ ದೇವರಾಜ ಕನ್ನಡಗಿ, ಸಹರಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಸಿದ್ದಿಕಿ, ಸಮಾಜ ಸೇವಕಿ ಕಸ್ತೂರಿಬಾಯಿ ಹರಿಕೃಷ್ಣ ಸೇರಿದಂತೆ ಮತ್ತಿತರರಿದ್ದರು.
ಅಂತರಂಗ ಸಂಗೀತ ಸಂಸ್ಥೆಯ ವಿದ್ಯಾರ್ಥಿಗಳಾದ ಶೋಭಿತ್, ಶ್ರೇಯಾ, ಕಾವೇರಿ, ಮಲ್ಲಿಕಾರ್ಜುನ, ಜೀವನ, ಅಚಿಜಲಿ, ಜೀವಿತಾ, ಹೃಷಿಕೇಶ್, ಅಪ್ಪು ಅವರಿಂದ ಗಾಯನ ಜರುಗಿತು.