ಗದಗ,ಜೂ15 : ಸಂಗೀತ ಕಲಾವಿಧರನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಡಲು ಇಂತಹ ಸಂಘ-ಸಂಸ್ಥೆಗಳು ರಾಜ್ಯದ ಗಡಿ ಭಾಗದಲ್ಲಿ ಹೆಚ್ಚು ಸ್ಥಾಪನೆಗೊಳ್ಳಬೇಕೆಂದು ಹುಬ್ಬಳ್ಳಿ ಮೂರುಸಾವಿರ ಮಠದ ಜ. ಡಾ. ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು ಹೇಳಿದರು.
ನಗರದ ವಿರೇಶ್ವರ ಪುಣ್ಯಾಶ್ರಮದ ಉಭಯ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗಾನಯೋಗಿ ಸಮಗ್ರ ಸೇವಾ ಬಹು ಉದ್ದೇಶಿಯ ಸಂಸ್ಥೆ ಮೈಂದರ್ಗಿ ಸಾ. ಮಹಾರಾಷ್ಟ್ರ ಎಂಬ ನಾಮಪಲಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಗದುಗಿನ ತೋಂಟದಾರ್ಯ ಶ್ರೀಮಠದ ಜ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ವಿರೇಶ್ವರ ಪುಣ್ಯಾಶ್ರಮದ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕ ಸುಚೇಲಕುಮಾರ ಸಾಲಿಮಠ, ಅಧ್ಯಕ್ಷ ಸೋಮಶೇಖರಯ್ಯ ಸಾಲಿಮಠ, ಕಾರ್ಯದರ್ಶಿ ಸುನಿಲ್ ಸವಳಿ, ಖಜಾಂಚಿ ಲಕ್ಷ್ಮೀಪುತ್ರ ಕುಂಬಾರ, ಧಾರವಾಡ ಕವಿವಿಯ ಪತ್ರಿಕೋಧ್ಯಮದ ಮುಖ್ಯಸ್ಥ ಡಾ. ಚಂದೂನವರ ಸೇರಿದಂತೆ ಮುಂತಾದವರು ಇದ್ದರು.