ಸಂಗೀತ ಅನುಕರಣೆ ಒಂದು ಕಲೆ :ರೇವಯ್ಯ ವಸ್ತ್ರದಮಠ

ಕಲಬುರಗಿ:ಡಿ.31: ನಗರದ ರೋಟರಿ ಕ್ಲಬ್ ನಲ್ಲಿ ಫ್ರೆಂಡ್ಸ್ ಗ್ರೊಪ್ ಹಾಗೂ ರೋಟರಿ ಕ್ಲಬ್ ಕಲಬುರಗಿ ಆಯೋಜಿಸಿದ್ದ ನಾದಪ್ರಿಯನ ನಾದಯಾನ ಕಾರ್ಯಕ್ರಮವನ್ನು ವಿದ್ವಾನ್ ರೇವಯ್ಯ ವಸ್ತ್ರದಮಠ ಉದ್ಘಾಟಿಸಿ ಸಂಗೀತದ ಅನುಕರಣೆಯ ಒಂದು ಕಲೆ ವಿಶಿಷ್ಠ ಕಲೆಯಾಗಿದ್ದು ಸುಲಭವಾಗಿ ಒಲಿಯುವಂತಹದ್ದು ಅಲ್ಲ ಎಂದು ಹೇಳಿದರು.
ಹಿರಿಯ ಗಾಯಕ ರಮೇಶ ಜೋಶಿ ಅವರ ಗಾನ ಯಾನದ ಸುವರ್ಣ ಮಹೋತ್ಸವ ಪ್ರಶಂಸನೀಯ ಎಂದು ಅವರು ಜೋಶಿ ಅವರು ಕಿಶೋರ ಕುಮಾರ ಅವರ ಹಾಡುಗಳನ್ನು ಅಧ್ಬತವಾಗಿ ಹಾಡುತ್ತಾರೆ. ಎಂದರು.
ಹಿರಿಯ ವೈದ್ಯ ಡಾ ಮಲ್ಹಾರರಾವ ಮಲ್ಲೆ ಸಂಗೀತದಿಂದ ಮನಸ್ಸಿಗೆ ಚೈತನ್ಯ ಸಿಗುತ್ತದೆ ಎಂದು ಹೇಳಿದರು ರಮೇಶ ಜೋಶಿ ವೃತ್ತಿ ಜೀವನವನ್ನು ವಿವರಿಸಿ ಪ್ರಶಂಸಿದರು.
ವೇದಿಕೆ ಮೇಲೆ ರೋಟರಿ ಕ್ಲಬ್ ಕಾರ್ಯದರ್ಶಿ ಸಿದ್ದಲಿಂಗ ಎಸ್ ಹತ್ತಿ, ನೂತನ ಪದಿವಿ ಮಹಾವಿದ್ಯಾಲಯ ಸಂಗೀತ ಮುಖ್ಯಸ್ಥ ಪ್ರೊ ಮಹೇಶ ಬಡಿಗೇರ, ಪಂಡಿತ ಹಿರಿಯ ತಬಲಾವಾದಕ ಜಯರಾವ ಕುಲಕರ್ಣಿ ಇದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 50 ಸಾಧಕರನ್ನು ಸನ್ಮಾನಿಸಿದರು. ರಮೇಶ ಜೋಶಿ ಅವರು ಹಾಡುಗಳನ್ನು ಹಾಡಿರಂಜಿಸಿದರು. ಚಿತ್ರಕಲಾವಿದ ನಟ ಚಿತ್ರ ನಿರ್ದೇಶಕ ನಾಗರಾಜ ಕುಂಬಾರ ಪ್ರಾಸ್ತಾವಿಕ ಮಾತನಾಡಿದರು. ರಂಜೀಶಾ ಜೋಶಿ ಪ್ರಾರ್ಥನೆ ಗೀತೆ ಹಾಡಿದರು. ವಿಠ್ಠಲ ಆಂದೋಲಾ ನಿರೂಪಿಸಿದರು.
ಹಿರಿಯ ಕಲಾವಿದರು,ಜೋಶಿ ಪರಿವಾರದವರು, ಗೆಳೆಯರು ಮುಂತಾದವರು ಇದ್ದರು.