ಸಂಗೀತೋತ್ಸವ ಕಾರ್ಯಕ್ರಮ

ಹುಬ್ಬಳ್ಳಿ,ಫೆ21 : ಸಂಸದರ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರೇರಿತ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆ ಹಾಗೂ ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಫೆ.23 ರಿಂದ 25 ರವರೆಗೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಮೂರು ದಿನಗಳವರೆಗೆ ಪಂ.ಕುಮಾರ ಗಂಧರ್ವರ ಜನ್ಮಶತಾಬ್ಧಿ ಸಂಗೀತೋತ್ಸವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಕ್ಷಮತಾ ಸಂಸ್ಥೆ ಅಧ್ಯಕ್ಷ ಗೋವಿಂದ್ ಜೋಶಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.23ರಂದು ಸಂಜೆ 5.30 ಕ್ಕೆ ಸಂಗೀತೋತ್ಸವ ಉದ್ಘಾಟನೆಗೊಳ್ಳಲಿದ್ದು, ಸಂಜೆ.6.30 ಕ್ಕೆ ಜೈಪುರ-ಅತ್ರೌಲಿ ಘರಾಣೆಯ ಪ್ರತಿಭಾವಂತ ಗಾಯಕಿ ಪುಣೆಯ ಯಶಸ್ವಿ ಸರಪೆÇೀತದಾರ ಅವರ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದೆ ಎಂದರು.

ಫೆ. 24 ರಂದು ಸಂಜೆ.5.30 ಕಿರಾನಾ ಘರಾಣೆಯ ಪ್ರತಿಭೆ ಕೊಲ್ಕತ್ತಾದ ವಿದುಷಿ ಮನಾಲಿ ಬೋಸ್ ಅವರ ಸುಮಧುರ ಕಂಠದಿಂದ ಸಪ್ತಸ್ವರಗಳು ರಿಂಗಣಿಸಲಿವೆ. ಫೆ.25 ರಂದು ಸಂಜೆ 5.30 ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ.
ಅಂದು ಸಂಜೆ 7 ಗಂಟೆಗೆ ನವದೆಹಲಿಯ ಲಕ್ಷ್ಯ ಮೋಹನ ಹಾಗೂ ಆಯುಷ ಮೋಹನ್ ಸಹೋದರರ ಸಿತಾರ-ಸರೋದ ವಾದನಗಳ ಜುಗಲ್ ಬಂದಿಯೊಂದಿಗೆ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ ಎಂದರು.