ಸಂಗೀತಾ ಹುಲ್ಲೂರ ಅವರಿಗೆ ಪಿಎಚ್‍ಡಿ

ವಿಜಯಪುರ, ಮಾ. 15: ಸಂಗೀತಾ ಹುಲ್ಲೂರ ಅವರು ಸಲ್ಲಿಸಿದ್ದ “ಎಫೆಕ್ಟ್ ಆಫ್ ಮೆಡಿಟೇಷನ್‍ಆ್ಯಂಡ್ ಫಿಜಿಕಲ್ ಎಕ್ಸ್‍ರ್‍ಸೈಜಸ್ ಆನ್ ಸೈಕೋ-ಸೋಸಿಯೋಲಾಜಿಕಲ್ ಆ್ಯಂಡ್ ಫಿಜಿಯೋಲಾಜಿಕಲ್ ವೇರಿಯಬಲ್ಸ್ ಆಫ್ ಸ್ಪೋಟ್ರ್ಸ್‍ವುಮನ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಪಿಎಚ್‍ಡಿ ಪದವಿ ನೀಡಿದೆ.
ಸಂಗೀತಾ ಹುಲ್ಲೂರ ಅವರು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಪ್ರೊ. ಡಿ.ಎಂ. ಜ್ಯೋತಿ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಸಂಗೀತಾ ಹುಲ್ಲೂರ ಅವರನ್ನು ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.