ಸಂಗೀತಾ ಪಾಠಶಾಲೆಗಳು ಬೆಳಕಿಗೆ ಬರಬೇಕು : ನೇಮಿರಾಜ್ ನಾಯ್ಕ್ಸಂ

ಜೆ ವಾಣಿ ವಾರ್ತೆಕೊಟ್ಟೂರು, ಸೆ.14: ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸಂಗೀತ ಆಸಕ್ತಿ ಇರುವ ಪ್ರತಿಭೆಗಳು ಗುರುತಿಸಿ ಅವರನ್ನು ಸ.ರಿ.ಗ.ಮ.ಪಾ. ಕನ್ನಡ ಕೋಗಿಲೆ, ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡುವ ಹಾಗೇ ಇಂತಹ  ಸಂಗೀತಾ ಪಾಠಶಾಲೆಗಳು ಬೆಳಕಿಗೆ ಬರಬೇಕು ಎಂದು  ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ್  ತಿಳಿಸಿದರು.ಪಟ್ಟಣದ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಸ್ವರ ಸಂಗಮ ಟ್ರಸ್ಟ್ ಹಾಗೂ ಸ್ವರ ಸಂಗಮ ಹಿಂದೂಸ್ಥಾನಿ ಸಂಗೀತ  ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಸಂಗೀತದ ಬಗ್ಗೆ ಅಪಾರ ಜ್ಞಾನ ಉಳ್ಳವರು  ಎಲೆ ಮರೆಯ ಕಾಯಿಯಂತಿರುವ ಎಷ್ಟೋ ಪ್ರತಿಭೆಗಳು ಬೆಳಕಿಗೆ ಬರದೇ ಹಾಗೇ ಉಳಿದುಕೊಂಡಿದ್ದಾರೆ ಇಂತವರನ್ನು ಗುರುತಿಸಿ ದೊಡ್ಡ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವೇದಿಕೆ ನಿರ್ಮಿಸಲು ಈ ಸ್ವರ ಸಂಗಮ ಟ್ರಸ್ಟ್ ಸಹಾಯವಾಗಿ ಕೈ ಜೋಡಿಸಬೇಕು ಹಾಗೂ ನಮ್ಮ ಕ್ಷೇತ್ರದಲ್ಲಿ ರಂಗ ಮಂದಿರ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ನಂತರ ಎಂಎಂಜೆ ಹರ್ಷವರ್ಧನ್ ಮಾತಾನಾಡಿ ತಾಲೂಕಿನಲ್ಲಿ ಅದ್ಭುತ ಪ್ರತಿಭೆಗಳಿದ್ದರೂ ಸರಿಯಾದ ವೇದಿಕೆ ಸಿಗದೇ ಬೆಳಕಿಗೆ ಬರುತ್ತಿಲ್ಲ, ತಾಲೂಕಿನಲ್ಲಿ ಈ ತರಹದ ಸಂಗೀತ ಪಾಠಶಾಲೆ ಅತ್ಯವಶ್ಯಕವಾಗಿದೆ, ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವ ಹಾಗೆ ಉತ್ತಮ ಪ್ರತಿಭೆಗಳನ್ನು ಈ ಸ್ವರ ಸಂಗಮ ಟ್ರಸ್ಟ್ ಒದಗಿಸಲಿ ಎಂದು ತಿಳಿಸಿದರು.ಡಿಎಸ್ಎಸ್ ಜಿಲ್ಲಾಧ್ಯಕ್ಷ ಬಿ. ಮರಿಸ್ವಾಮಿ  ಮಾತನಾಡಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಈ ಸ್ವರ ಸಂಗೀತ ಟ್ರಸ್ಟ್ ಸಂಸ್ಥಾಪಕರು  ಉತ್ತಮ ಪ್ರತಿಭೆಗಳನ್ನು ಗುರುತಿಸಿ ಸಂಗೀತ ಕ್ಷೇತ್ರದಲ್ಲಿ  ಒಂದು ಹೊಸ  ಅಲೆ ನಿರ್ಮಾಣ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಇಂತಹ ಕಲಾ ಟ್ರಸ್ಟ್ಗಳಿಗೆ ನಾವುಗಳು ಸದಾ ಪ್ರೋತ್ಸಾಹ ನೀಡುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಟ್ರಸ್ಟ್  ಸಂಸ್ಥಾಪಕರಾದ ಶ್ವೇತಾ ಬಸವರಾಜ್, ಭರತನಾಟ್ಯ ಶಿಕ್ಷಕರಾದ ಶೀಲಾ ಮಹದೇವ್, ಪಿಡಿಓ ಶಾಂತ್ ಕುಮಾರಿ , ವಿರೇಶ್ ಗೌಡ ,ಇನ್ನು ಮುಂತಾದವರು ಉಪಸ್ಥಿತರಿದ್ದರು. ಸಂಗೀತ ಶಾಲಾ ಮಕ್ಕಳಿಂದ ನೃತ್ಯ, ಗಾಯನ, ನೆರವೇರಿಸಲಾಯಿತು,  ಲತಾ ಬಳ್ಳಾರಿ, ಸ್ವಾಗತಿಸಿ ವಂದಿಸಿದರು,