
ಬೀದರ:ಎ.10:ಸÀಂಗೀತವನ್ನು ಆಲಿಸುವುದರಿಂದ ಆಯುಷ್ಯದಲ್ಲಿ ಹೆಚ್ಚಳವಾಗಿ, ಆರೋಗ್ಯ ಭಾಗ್ಯವೂ ದೊರೆಯುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷರಾದ ರಾಜೇಂದ್ರಕುಮಾರ್ ಗಂದಗೆಯವರು ಅಭಿಪ್ರಾಯ ಪಟ್ಟರು. ಅವರು ಸೆವನ ಸ್ಟಾರ್ಸ ಮೆಲೊಡಿ ಸೌಂಡ್ ಮ್ಯೂಸಿಕ್ ಗುಂಪಿನ ವತಿಯಿಂದ ಅಖಿಲ ಭಾರತ ವಿ. ವಿ.ಗಳ ನೌಕರರ ಒಕ್ಕೂಟ ಹಾಗೂ ಜೈಹಿಂದ ಹಿರಿಯ ನಾಗರಿಕರ ಸಂಘದಿಂದ ಸಂಯುಕ್ತ ವಾಗಿ, ನಗರದ ವೈಷ್ಣವಿ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಕರೋಕೆ ವ್ಯವಸ್ಥೆಯಲ್ಲಿ ಕನ್ನಡ, ಹಿಂದಿ ಹಾಗೂ ಮರಾಠಿಯ ಸುಪರ್ ಹಿಟ್ ಹಾಡುಗಳ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಕಲುಷಿತ ವಾತಾವರಣ ಹಾಗೂ ಯಾಂತ್ರಿಕ ಬದುಕಿನಲ್ಲಿ ಜನರಲ್ಲಿ ಸಹನ ಶಕ್ತಿಯ ಕೊರತೆಯಾಗಿ, ಇಲ್ಲ-ಸಲ್ಲದ ಜಗಳ ಹಾಗೂ ಖಿನ್ನತೆಗಳು ಹುಟ್ಟಿಕೊಳ್ಳುತ್ತಿವೆ. ಸಂಗೀತದ ಗಾಯನ ಶ್ರವಣದಿಂದ ಮನಸ್ಸು ಎಕಾಗ್ರಚಿತ್ತವಾಗಿದ್ದು, ಆರೋಗ್ಯದ ಮೇಲೆ ಅನುಕೂಲ ಪರಿಣಾಮ ಬೀರುತ್ತದೆ ಎಂದರು. ನಿವೃತ್ತ ಅಧಿಕಾರಿಗಳಾದ ವೀರಭದ್ರಪ್ಪ ಉಪ್ಪಿನ ಹಾಗೂ ನಾರಾಯಣರಾವ ಕಾಂಬಳೆಯವರು ಅಚ್ಚುಕಟ್ಟಾದ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಿರುವುದನ್ನು ಶ್ಲಾಘಿಸಿದರು. ಜಿಲ್ಲಾ/ರಾಜ್ಯ ಸರ್ಕಾರಿ ನೌಕರ ಸಂಘದ ಕಾರ್ಯಕ್ರಮಗಳಲ್ಲಿ ಜೈ ಹಿಂದ ಹಿರಿಯ ನಾಗರಿಕರ ಸಂಘವನ್ನು ಸೇರಿಸಿಕೊಳ್ಳಲಾಗುವುದು ಎಂದು ಘೋಷಿಸಿದರು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಂಸ್ಥೆಯ ಗೌರವಾಧ್ಯಕ್ಷ ದೇವೇಂದ್ರ ಕಮಲರವರು ಅಧ್ಯಕ್ಷತೆ ವಹಿಸಿದ್ದರು.
ವೀರಭದ್ರಪ್ಪ ಉಪ್ಪಿನ, ನಾರಾಯಣ ರಾವ್ ಕಾಂಬಳೆ, ರಾಧಾ ಎವಲೆ ಹಾಗೂ ಶಾಂಭವಿ ಕಲ್ಮಠ ರವರು ಸುಶ್ರಾವ್ಯವಾಗಿ ಹಾಡಿದರು.
ರಾಮಕೃಷ್ಣ ಮುನಿಗ್ಯಾಲ, ವಿಜಯಕುಮಾರ್ ಸೂರ್ಯಾನ, ರಾಜೇಂದ್ರ ಸಿಂಗ್ ಪವಾರ್, ಎಸ್. ವಿ. ಕಲ್ಮಠ, ವೇದಿಕೆಯಲ್ಲಿದ್ದರು.
ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ, ವಿಜಯಕುಮಾರ್ ಉಪ್ಪಿನ, ನಾಗೇಂದ್ರ ದಂಡೆ, ಅಪ್ಪಾ ರಾವ್ ಸೌದಿ,
ಸುಭಾಷ ರಾವ ಆಳಂದಿ, ಶಂಕರ ಚಿದ್ರಿ, ಶಿವ ಪುತ್ರ ಮೆಟಗೆ,ಪ್ರಕಾಶ ಕುಲಕರ್ಣಿ, ಸಂಗಶೆಟ್ಟಿ ಜಗದೇವ, ಸುಧಾಕರ್ ಬಿರಾದಾರ, ಕೆ.ವಿ.ಪಾಟೀಲ್, ರಮೇಶ್ ಬಾಬು, ಅರವಿಂದ್ ಕುಲಕರ್ಣಿ, ಲಲಿತಾ ಮುನಿಗ್ಯಾಲ, ಮಂದಾಕಿನಿ ಉಪ್ಪಿನ, ಶಾಂತಾಬಾಯಿ- ಮಲ್ಲಿಕಾರ್ಜುನ ರಾಸೂರ, ಜೈಶ್ರೀ ರಾಜಾಪುರ, ಅರುಣಾ, ಸಂತೋಷ ರಾಜೇಶ್ವರಿ, ಕವಿತಾ, ಪಾರಮ್ಯ, ಶೋಭಾ, ಜೈಶ್ರೀ, ಇಂದು ಹಾಜರಿದ್ದರು.
ರಮಾ ಮುರ್ಕೆಯವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಗಂಗಪ್ಪ ಸಾವಳೆಯವರು ವಂದಿಸಿದರು. ರೇಖಾ ಸೌದಿ, ರಮಾ ಕುಲಕರ್ಣಿ ನಂದಕುಮಾರ್ ತಾಂದಳೆ, ನಿಂಗರಾಜ ಅರಸ ರವರು ಹಾಡಿದರು.