ಸಂಗೀತ,ನಾಟಕ, ಚಿತ್ರಕಲೆ, ನಾಟ್ಯ ನೋಡಿ ಆನಂದ ಪಡಬೇಕು: ಅಂದಾನಿ

ಕಲಬುರಗಿ:ಮಾ.26: ನಗರದ ಸೇಡಂ ಶಹಬಾದ ವರ್ತುಲ ರಸ್ತೆಯಲ್ಲಿರುವ ಡಾ ಸಿಧ್ದಯ್ಯಾ ಪುರಾಣಿಕ ಸಮುಚ್ಚ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಆರ್ಟ ಗ್ಯಾಲರಿಯಲ್ಲಿ ಶುಕ್ರವಾರ ಹಿರಿಯ ಚಿತ್ರಕಲಾವಿದ ಡಾ.ವಿ.ಜಿ.ಅಂದಾನಿ ಅವರು ಉದ್ಘಾಟಸಿ ಕಲಬುರಗಿ ಆರ್ಟ ಸೊಸೈಟಿವತಿಯಿಂದ ಪ್ರಥಮ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಪ್ರದರ್ಶನ ಗಿರೀಶ ಕುಲಕರ್ಣಿ ಅವರು ಒಳ್ಳಯ ಕೆಲಸ ಮಾಡಿದ್ದಾರೆ. ಸಿಜಾನ ದೊಡ್ಡ ಕಲಾವಿದರು ಅವರು ಕಲಾ ಕೃತಿಗಳ ವಿಮರ್ಶೆ ಮಾಡುತ್ತಾ ಹೊಸತರ ಕೆಲಸ ಮಾಡುತ್ತಾ ಬಂದಿರುತ್ತಾರೆ. ಹೊಸತನ ಕಲೆಯು ಅರ್ಥವಾಗದಿದ್ದರೂ ನೋಡಿ ತಿಳಿದುಕೊಳ್ಳಬೇಕು ಶಾಸ್ರ್ತೀಯ ಸಂಗೀತ ಹೇಗೆ ಅರ್ಥವಾಗುವುದಿಲ್ಲವೊ ಅದನ್ನು ಕೇಳಲು ಕಲಿಯಬೇಕು ಚಂದಿದೆ ಎನ್ನುವುದು ಅರ್ಥ ಮಾಡಿಕೊಳ್ಳಬೇಕಾದರೆ ಒಳಗಿನಿಂದ ತಿಳಿಯಬೇಕು ಸಂಗೀತ,ನಾಟಕ, ಚಿತ್ರಕಲೆ, ನಾಟ್ಯ ಇವುಗಳನ್ನು ನೋಡಿ ಆನಂದ ಪಡಬೇಕು ಎಂದು ಹೇಳಿದರು.

ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರು ಮಾತನಾಡುತ್ತಾ ಕಲೆ,ಸಾಹಿತ್ಯ ಸಂಗೀತ, ನಾಟಕ ಕಲಾವಿದರು ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಖುಷಿಕೊಡುತ್ತೆ ಮುಂದಿನ ದಿನಗಳಲ್ಲಿ ರಂಗನೇಪಥ್ಯ ಶಿಬಿರ ಆಯೋಜಿಸಲಾಗುವುದು ಚಿತ್ರಕಲಾವಿದರು ಭಾಗವಹಿಸಿಲು ಕೋರಿದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಮ್ಯಾನೇಜರ ಚಂದಮ್ಮ ಸಿ.ಪಾಟೀಲ, ಅಖಿಲ ಭಾರತೀಯ ವೀರಶೈವ ಮಹಾಸಭಾ ಅಧ್ಯಕ್ಷಕಿ ಹಾಗೂ ರೋಟರಿ ಕ್ಲಬ್ ಆಫ್ ನಗರ ಅಧ್ಯಕ್ಷಕಿ ಡಾ. ಸುದಾ ಹಾಲಕಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಸಂಗಮೇಶ ಎಸ್.ಚಿಲಶೆಟ್ಟಿ ವೇದಿಕೆ ಮೇಲೆ ಇದ್ದರು. ಕಲಬುರಗಿ ಆರ್ಟ ಸೊಸೈಟಿ ಅಧ್ಯಕ್ಷ ಗಿರೀಶ ಕುಲಕರ್ಣಿ ಅಧ್ಯಕ್ಷತೆವಹಿಸಿದ್ದರು.

ಪ್ರೊಫೆಶನಲ್ ಪ್ರಶಸ್ತಿಗೆ ಕಲಾವಿದರಾದ ಅಂಬಾರಾಯ ಚಿನಮಳ್ಳಿ, ಅವಿನಾಶ ಸದಾನಂದ, ಮಾಂತೇಶ್ವರಿ ಕಂಠಿ ಮತ್ತು ವಿದ್ಯಾರ್ಥಿ ಪ್ರಶಸ್ತಿ ಬಸವರಾಜ ಮತ್ತು ಸಚಿನ ಪ್ರಶಸ್ತಿ ಮತ್ತು ನಗದು ಹಣ, ನೆನಪಿನ ಕಾಣಿಕೆ ನೀಡಲಾಯಿತು.

ರಾಮಕೃಷ್ಣ ವಿ. ಕುಲಕರ್ಣಿ, ರೋಷನ ಮಾಹೂರಕರ್, ಜಯಾ ಡಿ. ಸಿಂಗ್É ಪ್ರಮಾಣ ಪತ್ರ ನೀಡಿ ಗೌರವಿಸಿಲಾಯಿತು. ಗಿರೀಶ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು ಸೂರ್ಯಕಾಂತ ನಂದೂರ ನಿರೂಪಿಸಿದರು. ಅಶೋಕ ಚಿತ್ತಕೋಟಿ ವಂದಿಸಿದರು. ರಮೇಶ ಪಾಟೀಲ ಭಕ್ತಿಗೀತೆ ಹಾಡಿದರು. ನಗರದ ಚಿತ್ರಕಲಾವಿದರು ಕಲಾಆಸಕ್ತರು ಉಪಸ್ಥvರಿÀದ್ದÀರು.

ಚಿತ್ರಕಲಾ ಪ್ರದರ್ಶನ ಮಾರ್ಚ 26 ರಿಂದ 29 ರವರಗೆ ಬೆಳ್ಳಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕಲಾಆಸಕ್ತರು,ಸಾರ್ವಜನಿಕರು ವಿಕ್ಷೀಸಬಹುದು.