ಸಂಗೀತದ ರಸದೌತಣ ಉಣಬಡಿಸಿದ  ಕುಕನೂರಿನ ಯುವ ಕಲಾವಿದ ಮುಕುಂದ ಭಜಂತ್ರಿ


ಸಂಜೆವಾಣಿ ವಾರ್ತೆ
ಕುಕನೂರು:ನ,19- ಪಟ್ಟಣದ ಇಟಗಿ ಭೀಮಾಂಬಿಕಾಮಠದ ರಂಗಮಂದಿರದಲ್ಲಿ ಗುರುವಾರ ದಿವಸ  ಶ್ರೀ ಪಂಚಾಕ್ಷರಿ ಸಾಹಿತ್ಯ ಸಂಗೀತ ಶಿಕ್ಷಣ ಕ್ರೀಡೆ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ (ರಿ) ಕುಕನೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮದ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಯುವ ಕಲಾವಿದ ಮುಕುಂದ ಭಜಂತ್ರಿಯವರಿಂದ ಭಾವಗೀತೆ ಭಕ್ತಿಗೀತೆ ಜನಪದ ಗೀತೆ ಎಲ್ಲಾ ಒಳಗೊಂಡು ಸುಮಧುರ ಸುಗಮ ಸಂಗೀತದಿಂದ ಸಂಗೀತ ರಸದೌತಣ ಉಣಬಡಿಸಿದರು.  ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಶ್ರೀ ಅನ್ನದಾನೇಶ್ವರ ಶಾಖ ಮಠದ ಮಹದೇವ ದೇವರು ಮಾತನಾಡಿ, ಸಂಗೀತ ಸಂಸ್ಕಾರ ಕಲಿಸುತ್ತದೆ ಸಂಗೀತ ಕೇಳುವುದು ಹಾಡುವುದು ರೂಡಿಸಿಕೊಂಡರೆ ಶಾಂತಿ ನೆಮ್ಮದಿ ಉತ್ಸಾಹ ಚೈತನ್ಯ ದಿಂದಿರಲು ಸಾಧ್ಯ ಯುವಕರು ಹೆಚ್ಚಿನ ರೀತಿಯಲ್ಲಿ ಸಂಗೀತ ಅಭ್ಯಾಸ ಮಾಡಬೇಕು ನಾಡಿನ ಕಲೆ ಸಂಸ್ಕೃತಿ ಉಳಿವಿಗೆ ಪ್ರತಿಯೊಬ್ಬ ಪಣತೊಡಬೇಕು ಕುಕನೂರಿನ ಯುವ ಕಲಾವಿದರು ರಾಜ್ಯ ಅಂತರಾಷ್ಟ್ರ ಮಟ್ಟಿಗೆ ಬೆಳೆಯಬೇಕೆಂಬುದು ನಮ್ಮ ಆಸೆ ಅದಕ್ಕೆ ಸಹಾಯ ಸಹಕಾರಕ್ಕೆ ನಾನು ಸದಾ ಸಿದ್ಧ . ಪಟ್ಟಣದ ಸಂಗೀತದ ಮೇರು ಪ್ರತಿಭೆ ದಿವಂಗತ ಶಿವಕುಮಾರ ಕುಕನೂರವರ ಪುತ್ರರು ಊರಲ್ಲಿ ಸಂಗೀತ ಪಾಠಶಾಲೆ ಪ್ರಾರಂಭಿಸಿ ಜೊತೆ ಜೊತೆಗೆ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೆರವೇರಿಸಿ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನಯ ಕಾರ್ಯ ಎಂದರು.
ಈ ಸಂದರ್ಭದಲ್ಲಿ ಜನಪದ ಕಲಾವಿದ ದೊಡ್ಡ ಯಮನೂರಪ್ಪ ಭಜಂತ್ರಿ, ಸಂಸ್ಥೆಯ ಅಧ್ಯಕ್ಷ ಮುರಾರಿ ಭಜಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ದೀಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಮುಖಂಡ ಈರಣ್ಣ ಅಣ್ಣಿಗೇರಿ ಶರಣಪ್ಪ ಕೊಪ್ಪದ್ ಎಂಬಿ ಹಿರೇಮಠ ಪಟ್ಟಣ ಪಂಚಾಯಿತಿ ಸದಸ್ಯೆ ರಾಧಾ ದೊಡ್ಡಮನಿ ಮುಖಂಡರಾದ ಮಂಜುನಾಥ್ ಮಾಲಗಿತ್ತಿ ಸಂಗೀತ ಶಿಕ್ಷಕ ಮಾರುತೇಶ್ ಮೇಣಾದಾಳ, ಲಕ್ಷ್ಮಣ ಬೆದವಟ್ಟಿ ,ಗಂಗಾಧರ್ ಅವಾಟೆ, ಶಾವಮ್ಮ  ಶಿವಕುಮಾರ, ಜಿ ಪಂ ಮಾಜಿ ಸದಸ್ಯ ವಿಜಯಲಕ್ಷ್ಮಿ ಭಜಂತ್ರಿ, ಅಂಬರೀಶ್ ಬಡಿಗೇರ್, ಸುಮತಿ ಮಂಜುನಾಥ್ , ಭಾಸ್ಕರ್ ಆಚಾರ್, ಶ್ರೀಕಾಂತ್ ಕಿತ್ತೂರ್, ಸುಮಂತ್ ಭಜಂತ್ರಿ , ಮಾಂತೇಶ್ , ರಾಕೇಶ್, ಮಂಜುನಾಥ್, ಸೇರಿದಂತೆ ಇತರರು ಇದ್ದರು..