ಸಂಗೀತದಿಂದ ಸತ್ಸಂಗದ ಹಾದಿ ಸುಗಮ

ಕಲಬುರಗಿ,ಮಾ.16-ಸತ್ಸಂಗ ಬಹಳ ಉತ್ತಮ ಮುಕ್ತಿಯ ಮಾರ್ಗವಾಗಿದೆ. ಆ ಮಾರ್ಗವನ್ನು ಸೇರಬೇಕಾದರೆ ಮೊದಲು ಸಂಗೀತದ ಮಾರ್ಗವನ್ನು ಹಿಡಿಯಬೇಕು. ಪ್ರತಿಯೊಬ್ಬ ಮಾನವ ಸಂಗೀತವು ಸಾಧನೆಯ ಹಾದಿಯಲ್ಲಿ ಸಾಗಬೇಕು. ಈ ಹಾದಿಯಲ್ಲಿ ನಡೆದ ಮನುಷ್ಯನು ಜೀವನದಲ್ಲಿ ಮುಕ್ತಿಯನ್ನು ಹೊಂದುತ್ತಾನೆ ಎಂದು ಬಸವಲಿಂಗ ಸ್ವಾಮಿ ಕಿರಣಗಿ ಹೇಳಿದರು.
ನಗರದ ಕಪನೂರ ಬಡಾವಣೆ ಸಮೀಪದಲ್ಲಿರುವ ಕೆ.ಕೆ.ನಗರದ ಶಿವಯೋಗಿ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಸದ್ಗುರು ಸೇವಾ ಪ್ರತಿಷ್ಠಾನ ಟ್ರಸ್ಟ್ ಉದ್ಘಾಟನೆ ಹಾಗೂ ಸಂಗೀತ ಸತ್ಸಂಗ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಸ್ವಾಮಿಗಳು ಕಪನೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಸವರಾಜ ಬೆಳಮಗಿ, ರಾಮಚಂದ್ರ ನೆಲ್ಲೂರ, ಶ್ರವಣ ಕುಮಾರ್ ಆಗಮಿಸಿದ್ದರು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ, ಹಿರಿಯ ಕಲಾವಿದರಾದ ಭಗವಂತಪ್ಪ ಕಣ್ಣೂರ, ಶಿವಗಂಗಮ್ಮಾ, ಗೀತಾ ಬಸವರಾಜ, ರತ್ನಮ್ಮ ಅವರು ಕಲಾ ಸೇವೆಯನ್ನು ಮಾಡಿದರು.