ಸಂಗೀತದಿಂದ ಶಾಂತಿ ನೆಮ್ಮದಿ

ಕಲಬುರಗಿ:ಎ.17:ಪಾಶ್ಚಿಮಾತ್ಯ ಸಂಗೀತಕ್ಕಿಂತ ನಮ್ಮ ಭಾರತೀಯ ಸಂಗೀತಕ್ಕೆ ಹೆಚ್ಚಿನ ಮಹತ್ವವಿದೆ ಸಂಗೀತದಿಂದ ಶಾಂತಿ ನೆಮ್ಮದಿ ದೊರಕುತ್ತದೆ ಎಂದು ಮಾಜಿ ವಿಧಾನ ಪರಿಷತ ಸದಸ್ಯರಾದ ಅಲ್ಲಮಪ್ರಭು ಪಾಟೀಲ್ ನೆಲೋಗಿ ನುಡಿದರು.

ಅವರು ನಗರದ ಶ್ರೀ ಗುರುಶಾಂತಲಿಂಗೆಶ್ವರ ಕಲ್ಯಾಣ ಮಂಟಪ ಶೇಖರೋಜಾ ದಲ್ಲಿ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕøತಿ ಸೇವಾ ಸಂಸ್ಥೆ ಹಾಗು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜರುಗಿದ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡುತ್ತಾ ಈ ಸಂಸ್ಥೆಯು ಹಲವಾರು ವರ್ಷಗಳಿಂದ ಅನೇಕ ಕಲಾವಿದರ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಭಾರತೀಯ ಸಂಗೀತ ಪರಂಪರೆ ಹಿಂದಿನಿಂದ ಬಂದಿದ್ದು ಮನುಷ್ಯನಿಗೆ ಅನ್ನ,ನೀರು, ಗಾಳಿ ಎಷ್ಟು ಮುಖ್ಯವೊ ಅಷ್ಟೇ ಸಂಗೀತ ಮುಖ್ಯವಾಗಿದೆ. ಸಂಗೀತ ಯಾರ ಸ್ವತ್ತಲ್ಲ ಕಠಿಣ ಪರಿಶ್ರಮದಿಂದ ಬರುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಪ್ರತಿಭಾವಂತ ಕಲಾವಿದರಿದ್ದಾರೆ. ಅವರನ್ನು ಸರಕಾರ ಹಾಗೂ ಸಂಘ ಸಂಸ್ಥೆಗಳು ಸಹಾಯ ಮಾಡುತ್ತಿರುವ ಕಾರ್ಯ ತುಂಬಾ ಶ್ಲಾಘನೀಯವಾದದ್ದು ಎಂದು ನುಡಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕಡಗಂಚಿಯ ಶ್ರೀ ಪಂಪಾಪತಿ ದೇವರು, ಕಿಣಗಿಯ ಶ್ರೀ ಶಿವಶಾಂತ ಶಿವಾಚಾರ್ಯರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಶ್ರೀ ಬಾಬುರಾವ ಕೋಬಾಳ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಶ್ರೀ ಮಡುಗೌಡ ಎಂ. ಗೋಳಸಾರ, ಕರಿಸಿದ್ದಪ್ಪ ಪಾಟೀಲ ಹರಸೂರ, ಅಮೃತಪ್ಪ ಮಲಕಪಗೌಡ, ದಯಾನಂದ ಎಮ್. ಪಾಟೀಲ್, ರುಕ್ಮೇಶ ಭಂಡಾರಿ, ಕರಿಬಸಪ್ಪ ಅಮರಗೊಳ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಆಕಾಶವಾಣಿ ಕಲಾವಿದರಾದ ಶ್ರೀ ಶಂಕರ ಹೂಗಾರ, ಗುರುಶಾಂತಯ್ಯ ಸ್ಥಾವರಮಠ, ಅಣ್ಣಾರಾವ ಶೇಳ್ಳಗಿ, ಶಿವರುದ್ರಯ್ಯ ಕಲಬುರಗಿ ಮಠ, ದತ್ತರಾಜ ಕಲಶೇಟ್ಟಿ, ಸೈದಪ್ಪ ಸಪ್ಪನಗೋಳ, ಶಾಂತಕುಮಾರ ಮಂಗಲಗಿ, ಪವಿತ್ರಾ ಜಿ.ಎಸ್, ಕುಮಾರಿ ಸ್ವಾತಿ ಬಿ. ಕಲಬುರಗಿ ಮಹಾಂತಪ್ಪ ಮಂದೇವಾಲ, ಬಸಯ್ಯ ಗುತ್ತೇದಾರ, ವಿಜಯಲಕ್ಷ್ಮೀ ಕೆಂಗನಾಳ, ಬಲಭೀಮ ನೆಲೋಗಿ, ಶಂಕರ ರುದ್ರವಾಡಿ, ಉದಯಕುಮಾರ ಜಿ. ಭೀಮಳ್ಳಿ, ರಾಚಯ್ಯ ಸ್ವಾಮಿ ರಟಕಲ್, ಪ್ರಶಾಂತ ಗೋಲ್ಡ್‍ಸ್ಮೀತ, ಸಿದ್ರಾಮಪ್ಪ ಎಸ್. ಮುಂಡೋಡಗಿ ಇವರಿಂದ ಸಂಗೀತ ಕಾರ್ಯಕ್ರಮವನ್ನು ಜರುಗಿತು. ವಾದ್ಯಸಹಕಾರ ಜಯತೀರ್ಥ ಅಧ್ಯ, ರವೀಂದ್ರ ಕುಲಕರ್ಣಿ, ವೀರಭದ್ರಯ್ಯ ಸ್ಥಾವರಮಠ, ಮಹಾಂತೇಶ ಹರವಾಳ, ನಾಗಲಿಂಗಯ್ಯ ಸ್ಥಾವರಮಠ, ಮೌನೇಶ ಪಂಚಾಳ, ಚೇತನ ಬಿ. ಕೋಬಾಳ ಇವರಿಂದ ವಾದ್ಯ ಸಹಕಾರ ನೀಡಿದರು.