ಸಂಗೀತದಿಂದ ಮಾನಸಿಕ ನೆಮ್ಮದಿ

ಕಲಬುರಗಿ ಎ.7: ಸುಖ ದುಃಖ ಬಿಸಿಲು ನೆರಳಿನಂತೆ ಶಾಸ್ವತ ಸುಖವು ಇರುವುದಿಲ್ಲ, ಆದರೆ ಮನುಷ್ಯನ ದುಃಖ ಕಳೆಯಲು ಜಾನಪದ ಸಂಗೀತ ಅವಶ್ಯಕ ಎಂದು ಬಣಮಗಿಯ ಶ್ರೀ ರಾಚೋಟೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿ ನುಡಿದರು.

ಶಾಹಾಬಜಾರ ಚನ್ನಮಲ್ಲೇಶ್ವರ ನಗರದ ಶ್ರೀ ಅಕ್ಕಮಹಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀ ವೀರ ಸೋಮೇಶ್ವರ ಸಾಹಿತ್ಯ ಸಂಸ್ಕøತಿಕ ಸೇವಾ ಸಂಘ, ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜನಪದ ಸಮಾವೇಶ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಮನುಷ್ಯ ಆಧ್ಯಾತ್ಮದ ಕಡೆಗೆ ವಲವು ತೋರಿ ನಡೆಯಬೇಕು. ಕಡಿಕೋಳ ಮಡಿವಾಳಪ್ಪ, ಕಹಿನೂರು ಕೃಷ್ಣಪ್ಪ, ಗೊಬ್ಬೂರು ಭೋಜರಾಜ, ಸಂತ ಶಿಸುನಾಳ ಶರೀಫರು ಜಾನಪದ ತತ್ವಪದಗಳು ಹಾಡಿದ್ದಾರೆ, ಅವರ ಹಾಡುಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಿದೆ, ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕೆಂದು ನುಡಿದರು. ವೀಶೈವ ಲಿಂಗಾಯತ ಸ್ವಾಭೀಮಾನಿ ಬಳಗದ ಅಧ್ಯಕ್ಷರಾದ ಶ್ರೀ ಎಂ. ಎಸ್. ಪಾಟೀಲ ನರಿಬೋಳ ಉದ್ಘಾಟಿಸಿ ಮಾತನಾಡಿದರು. ಶ್ರೀ ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದರು, ಶಿವಪುತ್ರಯ್ಯಸ್ವಾಮಿ, ಕರಬಸಪ್ಪ ಅಮರಗೋಳÀ, ದಯಾನಂದ ಪಾಟೀಲ, ನೀಲಕಂಠ ಪಾಟೀಲ, ಭಾಸ್ಕರ ವೇದಿಕೆಯಮೇಲೆ ಇದ್ದರು. ಶ್ರೀ ಗುರುಶಾಂತಯ್ಯ ಸ್ಥಾವರಮಠ ರಾಜ್ಯಪ್ರಶಸ್ತಿ ವಿಜೇತರಾದ ಬಾಬುರಾವ ಕೋಬಾಳ, ದತ್ತರಾಜ ಕಲಶೆಟ್ಟಿ, ಶ್ರೀಮತಿ ಪವಿತ್ರಾ ರಾಚಯ್ಯ ಮಠಪತಿ, ಪ್ರಭಾಕರ ಚೆಕ್ಕಿ, ಶ್ರೀಮತಿ ಕಸ್ತೂರಿ ಗಟ್ಟಿಕರ, ಸಿದ್ರಾಮಪ್ಪ ಮಂಡೋಡಗಿ, ಕು. ಚೇತನ ಕೋಬಾಳ ಗುರುಲಿಂಗಯ್ಯ ಹಿತ್ತಲಶೀರೂರ, ದೇವಿಂದ್ರಪ್ಪ ನಂದಿಕೂರ, ಇವರಿಂದ ಜನಪದ, ತತ್ವಪದ, ದಾಸರವಾಣಿ, ವಚನ ಗಾಯನ, ರಸಮಂಜರಿ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಅಧ್ಯಕ್ಷರಾದ ಸಿದ್ರಾಮಪ್ಪ ಆಲಗೂಡಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತರಾಜ ಕಲಶೆಟ್ಟಿ ನಿರೂಪಿಸಿದರು.