ಸಂಗೀತದಿಂದ ಮನೋಲ್ಲಾಸ

ಕಲಬುರಗಿ,ಜ.22: ಸಂಗೀತದಿಂದ ಮನೋಲ್ಲಾಸ ಉಂಟಾಗಿ ಚೈತನ್ಯ ಮೂಡಿಸುವ ಅನನ್ಯತೆ ಸಂಗೀತಕ್ಕಿದೆ ಎಂದು ಹಿರಿಯ ವೈದ್ಯರು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಸ್. ಎಸ್.ಗುಬ್ಬಿ ಹೇಳಿದರು.
ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ ಗ್ಯಾಲರಿಯಲ್ಲಿ ಸುಕಿ ಸಾಂಸ್ಕ್ರತಿಕ ಸಂಸ್ಥೆ ಕಲಬುರಗಿ ಹಾಗು ಹೊಸ ವರ್ಷದ ಗಾನ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸಂಗೀತವನ್ನು ಒಂದು ಚಿಕಿತ್ಸಾ ಪದ್ಧತಿಯಾಗಿ ಬಳಸುವ ಪದ್ದತಿ ಪ್ರಚಲಿತದಲ್ಲಿದೆ ಎಂದ ಅವರು ಸಮಗೀತಕ್ಕೆ ಯಾವುದೇ ಸೀಮೆ ಇಲ್ಲ ಎಂದರು.
ಕೇಂದ್ರ ಚಲನ ಚಿತ್ರ ಸೆನ್ಸಾರ್ ಮಂಡಳಿ ಸದಸ್ಯೆ ಡಾ ಸುಜಾತಾ ಜಂಗಮಶೆಟ್ಟಿ ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಸಾಂಸ್ಕ್ರತಿಕ ಕ್ಷೇತ್ರ ಜೀವಂತಗೊಳ್ಳುತ್ತದೆ ಎಂದರು. ಕಲೆಯ ಎಲ್ಲ ಪ್ರಕಾರಗಳ್ಲಿ ಸಂಸ್ಥೆ ನೀಡುತ್ತಿರುವ ಆದ್ಯತೆ ಪ್ರಶಂಸಿದರು. ವೇದಿಕೆ ಮೇಲೆ ಚಾಂದ್ ಜಾಕ್ಸನ್, ಹಿರಿಯ ಬ್ಯಾಂಜೊ, ಕಾಂಗೊ ಮೌಥ ಆರ್ಗನ್ ಕಲಾವಿದ ಸಿ. ಕೇಶವರಾಜ್ ಉ¥ಸ್ಥಿತರಿದ್ದರು. ಅಧ್ಯಕ್ಷತೆ ಸುಕಿ ಸಾಂಸ್ಕ್ರತಿಕ ಸಂಸ್ಥೆಯ ಅಧ್ಯಕ್ಷ ಕಿರಣ ಪಾಟೀಲ ವಹಿಸಿದ್ದರು.
ಎಂ ಸಂಜೀವ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಗಯ್ಯ ಹಳ್ಳದ ಮಠ ಪ್ರಾರ್ಥಿಸಿದರು. ನಂತರ ಹೊಸ ವರ್ಷದ ಗಾನ ಸಂಭ್ರಮದಲ್ಲಿ ಗಾಯಕರು ರಂಜಿಸಿದರು.
ಡಾ ವಿ.ಜಿ.ಅಂದಾನಿ, ಬಸವರಾಜ ಜಾನೆ, ಮಂಜುಳಾ ಜಾನೆ, ಬಸವರಾಜ ಉಪ್ಪಿನ, ಡಾ ರೆಹಮಾನ್ ಪಟೇಲ್, ಮಹ್ಮದ ಅಯಾಜುದ್ದೀನ ಪಟೇಲ್, ನಾರಾಯಣ ಎಂ. ಜೋಶಿ, ಲಕ್ಷ್ಮೀಕಾಂತ ಮನೋಕರ್, ಶಂಕರಯ್ಯಾ ಘಂಟಿ, ಎಂ ಜಿ ಘನಾತೆ ಶಿವಕುಮಾರ ಸ್ವಾಮಿ, ಕಲ್ಪನಾ ನಯಿಯಮ್,ಸಿದ್ದು ಹಂಚನಾಳ, ಪ್ರಕಾಶ ದಂಡೋತಿ, ಶರಣು ಪಟ್ಟಣ ಶೆಟ್ಟಿ ಅಂಬರೀಶ ಕುಲಕರ್ಣಿ,ಮಹೇಶ ಕುಮಾರ ನಿಪ್ಪಾಣಿ, ಕವಿರಾಜ ನಿಂಬಾಳ, ವಿಠಲ ಮೇತ್ರೆ ಸಿದ್ದಣ ದಿಗ್ಗಾಂವಿ ಪ್ರತಿಭಾ ಆರ್ ಕಡಗಂಚಿ, ವಾಣಿಶ್ರೀ ಜೋಶಿ ಹಾಡಿ ರಂಜಿಸಿದರು. ಆನಂದ ಪಾಟೀಲ ನಿರೂಪಿಸಿದರು.