ಸಂಗೀತದಿಂದ ಮನುಷ್ಯನ ಜೀವನಕ್ಕೆ ನೆಮ್ಮದಿ

ಕಲಬುರಗಿ,ಸೆ.24-ಜೀವನದಲ್ಲಿ ಪ್ರತಿಯೊಬ್ಬರು ಸಂಗೀತ ಆಲಿಸಬೇಕು ಸಂಗೀತದಿಂದ ಮನುಷ್ಯನ ಜೀವನಕ್ಕೆ ನೆಮ್ಮದಿ ಸಿಗಲು ಸಾಧ್ಯ ಎಂದು ಬಂಗರಗಾದ ಚರಂತೇಶ್ವರ ಹಿರೇಮಠದ ಗುರುಲಿಂಗ ಶಿವಾಚಾರ್ಯರು ನುಡಿದರು.
ಆಳಂದ ತಾಲೂಕಿನ ಬಂಗರಗಾ ಗ್ರಾಮದ ಚರಂತೇಶ್ವರ ಹಿರೇಮಠ ಆವರಣದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಸಂಗೀತ ಕಲಾ ಸಂಸ್ಥೆ ಹಮ್ಮಿಕೊಂಡಿದ್ದ ಜನಪದ ಸಂಗೀತ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ಸಿಗುವ ಸವಲತ್ತು ಸಂಗೀತ ಕಲಾವಿದರಿಗೆ ಸಿಗಬೇಕು, ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಹಲವಾರು ರೀತಿಯ ಕವಿ ಕಲಾವಿದರು ಸಾಹಿತಿಗಳು ಇದ್ದಾರೆ ಅವರನ್ನು ಗುರುತಿಸಿ ಪೆÇ್ರೀತ್ಸಾಹಿಸಬೇಕು ಎಂದರು.
ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷÀ ಪ್ರಕಾಶ್ ಭೂಸಣಗಿ, ಗ್ರಾ.ಪಂ.ಸದಸ್ಯರಾದ ಶ್ರೀಶೈಲ ಪಾಟೀಲ, ಸಿದ್ಧಲಿಂಗ ಜಮಾದಾರ, ಗುಂಡಪ್ಪ ಪೂಜಾರಿ, ಪ್ರಕಾಶ್ ಕಾಂಬಳೆ, ಗ್ರಾಮದ ಮುಖಂಡರಾದ ಶ್ರೀಮಂತ ಚಿಚಕೋಟಿ, ಪಂಡೀತ ಜಿಡಗೆ, ಸಿದ್ದರಾಮಪ್ಪ ಭೂಸಣಗಿ, ಅಶೋಕ್ ಪಾಟೀಲ, ಅರುಣ್ ಚಿಚಕೋಟಿ ಉಪಸ್ಥಿತರಿದ್ದರು.
ಕಲಾವಿದರಾದ ವಿಠ್ಠಲ ಚಿಚಕೋಟಿ, ದೇವಿಂದ್ರ ಜಮಾದಾರ, ರಾಯಪ್ಪ ಮೂಲಗೆ, ರಾಮ ಬಂದಾಡೆ, ಕಲ್ಯಾಣಿ ಪೆÇೀ.ಪಾಟೀಲ, ಸರುಬಾಯಿ ಪೆÇೀ.ಪಾಟೀಲ, ರುಕ್ಮಿಣಿ ಪೂಜಾರಿ, ಜಗದೇವಿ ಬಿರಾದಾರ, ಗೌರಾಬಿಯಿ ಬಿರಾದಾರ, ಸರುಬಾಯಿ ಬಿರಾದಾರ, ಮಹಾದೇವಲಿಂಗ ಭಜನಾ ಸಂಘ ಬಂಗರಗಾ. ಚರಂತೇಶ್ವರ ಅಕ್ಕನ ಬಳಗ ಬಂಗರಗಾ. ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಸಂಘ ಈ ಎಲ್ಲಾ ಕಲಾವಿದರು ಸಹ ಕಲಾವಿದರು ತಮ್ಮ ಸಂಗೀತ ಸೇವೆ ಸಲ್ಲಿಸಿದರು. ಶ್ರೀ ಬ್ರಹ್ಮಲಿಂಗೇಶ್ವರ ಸಂಗೀತ ಕಲಾ ಸಂಸ್ಥೆ ಅಧ್ಯಕ್ಷರಾದ ಮಹಿವೀರ ಚಿಚಕೋಟಿ. ಕಾರ್ಯದರ್ಶಿ ರೇವಪ್ಪ ಮುದ್ದಾಣಿ ಅವರು ಇದ್ದರು.