ಸಂಗೀತದಿಂದ ಮನಸ್ಸಿಗೆ ಮುದ

ಗದಗ, ಜ5- ಶಾರದಾ ಸಂಗೀತ ಸಾಂಸ್ಕøತಿಕ ಕಲಾ ಸಂಘ ಗದಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಗದಗ ಇವರ ಆಶ್ರಯದಲ್ಲಿ “ಪ್ರಾಯೋಜಿತ ಸಂಗೀತ ಕಾರ್ಯಕ್ರಮವನ್ನು ” ಹರ್ಷ ಬಿಲ್ಡಿಂಗ್ ವಿವೇಕಾನಂದ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಯಿತು.
ಪ್ರೊ. ಎಚ್.ಎನ್.ಕಾಳೆಯವರು ಅಧ್ಯಕ್ಷತೆಯನ್ನು ವಹಿಸಿ, ಇಂತಹ ಸಂಗೀತ ಕಾರ್ಯಕ್ರಮಗಳು ಸಮಾಜದ ಅಂಕು ಡೊಂಕಗಳನ್ನು ತಿದ್ದುತ್ತಾ ಹಾಗೂ ಮನಸ್ಸಿಗೆ ಮುದನೀಡುತ್ತಾ ಬಂದಿವೆ ಎಂದರು. ಅತಿಥಿಗಳಾಗಿ ಆಗಮಿಸಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿಗಳಾದ ರಾಜೀವ ಸಪ್ಪಟ್ಲ ಇವರು ಗದಗ ಜಿಲ್ಲೆ ಸಂಗೀತ ಕ್ಷೇತ್ರಕ್ಕೆ ಹೆಸರುವಾಸಿಯಾಗಲು ಪಂಡಿತ ಪುಟ್ಟರಾಜ ಗವಾಯಿಗಳು ಕಾರಣರು.ಇಂತಹ ಜಿಲ್ಲೆಯಲ್ಲಿ ಸತತವಾಗಿ ಸಂಗೀತ ಕಾರ್ಯಕ್ರಮಗಳು ನಡೆಯಲಿ ಎಂದರು.
ರಾಜೇಶ್ವರಿ ಎಸ್. ಸಜ್ಜನರ ಕಲಾವಿದರಿಂದ ಸುಗಮ ಸಂಗೀತವನ್ನು ಗಾಯನ ಮಾಡಿದರು, ಶ್ರೀ ವೀರುಪಾಕ್ಷ ಗವಾಯಿಗಳು ವಚನಗಳನ್ನು ಪ್ರಸ್ತುತಪಡಿಸಿದರು. ಹರ್ಷವರ್ಧನ, ಲಕ್ಷ್ಮೀಯವರಿಂದ ಭಾವ ಗೀತೆ ಹಾಗೂ ಪ್ರೊ. ಎಚ್.ಎನ್.ಕಾಳೆ ಯವರಿಂದ ಸಂತ ಶಿಶುನಾಳ ಷರೀಫರ ತತ್ವಪದಗಳನ್ನು ಹಾಡಿದರು. ವಿಜಯಕುಮಾರ ಸಜ್ಜನರ ವಂದಿಸಿದರು.