ಸಂಗೀತದಿಂದ ಮನಸ್ಸಿಗೆ ಉಲ್ಲಾಸ

ಕಲಬುರಗಿ,ಆ.30-ಸಂಗೀತಕ್ಕೆ ಮನಸ್ಸಿಗೆ ಖುಷಿ ನೀಡುವ ಶಕ್ತಿ ಇದೆ ಎಂದು ಶ್ರೀನಿವಾಸ ಸರಡಗಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ಡಾ.ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ನಗರದ ಕಲಾಮಂಡಳದಲ್ಲಿ ಭಾಗ್ಯಜ್ಯೋತಿ ಜನಪದ ಸಂಗೀತ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ಜಾನಪದ ಕಲಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತಕ್ಕೆ ಮನಸ್ಸು ಮದಗೊಳಿಸುವ ಶಕ್ತಿ ಇದೆ, ಸಂಗೀತ ಕೇಳಿದರೆ ಮನುಷ್ಯನಲ್ಲಿರುವ ನೋವು ಮಾಯವಾಗಿ ಮಂದಹಾಸ ಮೂಡುತ್ತದೆ. ಪ್ರತಿಯೊಬ್ಬರು ಸಂಗೀತ, ಕಲೆ, ಸಾಹಿತ್ಯದ ಕಡೆಗೆ ಹೆಚ್ಚಿನ ಒಲವು ತೋರಿಸಬೇಕು ಅಂದಾಗ ಕಲಾವಿದರಿಗೆ ಬೆಲೆ ಕೊಟ್ಟಂತಾಗುತ್ತದೆ ಎಂದರು.
ನಂದೂರ (ಕೆ) ಗ್ರಾಮ ಪಂಚಾಯತಿ ಅಧ್ಯಕ್ಷೆ ರಮಾದೇವಿ ನಾಗರಾe ಕಲ್ಲಾ ಅಧ್ಯಕ್ಷತೆ ವಹಿಸಿದ್ದರು.
ಶರಣಗೌಡ ಪಾಟೀಲ ಪಾಳಾ, ಹಿರಿಯ ಸಾಹಿತಿ ಸುಭಾಷ್ ಚಂದ್ರ ಕಶೆಟ್ಟಿ, ಜಗದೀಶ್ ಪಾಟೀಲ್ ಸನ್ನೂರು, ಕನ್ನಡ ಸಂಸ್ಕೃತಿ ಇಲಾಖೆ ವಲಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ್, ಅಜಯ್ ಕುಮಾರ್ ಧಮರ್ ಗಿಡ್ಡಿ, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ದತ್ತಪ್ಪ ಸಾಗನೂರ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಾಬುರಾವ್ ಕೋಬಾಳ, ಸಂಸ್ಥೆ ಅಧ್ಯಕ್ಷರಾದ ನಿರ್ಮಲಾ ಎ.ಕೋಣೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಾದ ಪವಿತ್ರ ವಿಶ್ವನಾಥ್ ರಾಜನಾಳ್ ಪ್ರಾರ್ಥನೆ ಗೀತೆ, ಸೈದಪ್ಪ ಸಪ್ಪನ್ ಗೋಳ್ ಸುಗಮ ಸಂಗೀತ, ಅಣ್ಣಾರಾಯ ಮತ್ತಿಮೂಡ ಕನ್ನಡ ಪರ ಗೀತೆಗಳು, ವಿಜಯಲಕ್ಷ್ಮಿ ಕೆಂಗನಾಳ ಜನಪದ ಗೀತೆ, ಸೂರ್ಯಕಾಂತ್ ಪೂಜಾರಿ ಮೊಹರಂ ಪದಗಳು, ನಾಗೇಶ್ರೀ ಈ ಕೋಣೆ ವಚನಗೀತೆ, ತೋಟಯ್ಯ ಶಾಸ್ತ್ರಿಗಳು ಶ್ರೀಶೈಲ್ ಪಾಟೀಲ್ ವೀರಭದ್ರಯ್ಯ ಸಾವರ್ ಮಠ ಚೇತನ್ ಕೋಬಾಳ್ ಮೌನೇಶ್ ಪಂಚಾಳ ಚೇತನ್ ಬೀದಿಮನಿ ಪ್ರಶಾಂತ್ ಕಂಬಾರ್. ಗಂಗಾಧರ್ ಪಾಟೀಲ್. ಪ್ರಶಾಂತ್ ಗೋಲ್ಡ್ ಸ್ಮಿತ್. ಉದಯಕುಮಾರ್ ಮಠಪ .ರವಿ ಸ್ವಾಮಿ ಗೋಟೂರ .ಸಂತೋಷ್ ಕೋಡ್ಲಿ . ಶಿವಯೋಗಿ ಭಜಂತ್ರಿ .ಅಲ್ಲದೆ ಇನ್ನು ಅನೇಕ ಕಲಾವಿದರು ತಮ್ಮ ಸಂಗೀತ ಸೇವೆ ಸಲ್ಲಿಸರೆಂದು ಸಂಸ್ಥೆ ಕಾರ್ಯದರ್ಶಿ ಅಂಬಾರಾಯ ಎಂ ಕೋಣೆ ತಿಳಿಸಿದ್ದಾರೆ