ಸಂಗೀತದಿಂದ ಆನಂದ, ಆಧ್ಯಾತ್ಮ ಪ್ರಾಪ್ತಿ

ಧಾರವಾಡ,ಮೇ.27: :ಸಂಗೀತ ಮನುಷ್ಯನಿಗೆಆನಂದ ಹಾಗೂ ಅಧ್ಯಾತ್ಮ ನೀಡುತ್ತದೆ.ಸುಗಮ ಸಂಗೀತಅನ್ನುವದು ಶಾಸ್ತ್ರೀಯ ಸಂಗೀತದ ತಳಹದಿಯ ಮೇಲೆ ನಿಂತಿದೆ ಎಂದು ನಾಡಿನಖ್ಯಾತರಾಗ ಸಂಯೋಜಕ ಪಂಡಿತ ಶ್ರೀಕಾಂತ ಕುಲಕರ್ಣಿಅಭಿಪ್ರಾಯ ಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪ ಆಯೋಜಿಸಿದ್ದ ಪಂ.ರವೀಂದ್ರಜಕಾತಿಯವರ ಸುಗಮ ಸಂಗೀತಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ, ಇಂದಿನ ಯುವ ಸಂಗೀತಕಲಾವಿದರು ಶ್ರಮವಹಿಸಿ ಸಂಗೀತಅಭ್ಯಾಸ ಮಾಡಬೇಕು ಹಾಗೂ ಹಿರಿಯರ ಸಂಗೀತ ಕಾರ್ಯಕ್ರಮಗಳನ್ನು ಆಲಿಸಬೇಕು.ಸಂಗೀತ ಕೇಳಿದಷ್ಟು ಕಲಿಯಲು ಸಲಿಸಾಗುತ್ತದೆ.ಸುಗಮ ಸಂಗೀತಅನ್ನುವದು ಕೇಳಲು ಎಷ್ಟುಆನಂದಕೊಡುತ್ತದೆಯೋಅμÉ್ಟೀಕಠಿಣವಾಗಿಇದೆಎಂದು,ತಮಗೆಧಾರವಾಡದಆಕಾಶವಾಣಿಕೇಂದ್ರ ಒಳ್ಳೆಯ ವೇದಿಕೆ ಆಗಿತ್ತು. ಆಮೂಲಕ ಎದರ್ಜೆಯ ಒಳ್ಳೆ ಗಾಯಕನಾಗಿ,ರಾಗ ಸಂಯೋಜಕನಾಗಲು ಅವಕಾಶ ಕೊಟ್ಟಿದೆಎಂದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕ್ರಮಗಳ ಕುರಿತು ಶ್ಲ್ಯಾ.ಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸ್ತ್ರೀಯ ಸಂಗೀತಕಲಾವಿದೆ ಸುಜಾತಾಗುರವಕಮ್ಮಾರಅವರು ಮಾತನಾಡಿ ಹೆಣ್ಣುಮಕ್ಕಳು ಸಹಜವಾಗಿಯೇ ಒಳ್ಳೆಯ ಕಂಠ ಹೊಂದಿರುವುದರಿಂದಅವರು ಮನೆಯ ಕೆಲಸದೊಂದಿಗೆ ಸದಾ ಒಳ್ಳೆಯ ಸಂಗೀತ ಕೇಳುತ್ತ ಹಾಗೂ ಹಾಡುತ್ತಾಇದ್ದರೆ ಮಾನಸಿಕವಾಗಿ ಮತ್ತುಆಧ್ಯಾತ್ಮಿಕವಾಗಿಆರೋಗ್ಯದಿಂದಇರುತ್ತಾರೆ, ಸಂಗೀತಎನ್ನುವದುಎಲ್ಲರನ್ನೂಆರೋಗ್ಯವಂತರನ್ನಾಗಿರಿಸುತ್ತದೆ. ಮುಂದುವರೆದು ಸಂಗೀತಕ್ಕೆ ಭಾμÉಇಲ್ಲಅದೊಂದು ನಾದ.ಎಲ್ಲರೂಯಾವ ಭಾμÉಯ ಹಾಡುಗಳನ್ನು ಕೇಳಿದರು ಆನಂದವಾಗುತ್ತದೆಎಂದರು.
ಆರಂಭದಲ್ಲಿ ಪಂ.ರವೀಂದ್ರಜಕಾತಿಅವರುಇವನಾರವಇವನಾರವಎಂಬ ಬಸವÀಣ್ಣನವರ ವಚನ,ಭಾವಗೀತೆ, ಭಕ್ತಿಗೀತೆ,ದಾಸರಪದ ಹಾಗೂ ಜಾನಪದ ಹಾಡುಗಳನ್ನು ಸುಶ್ರಾವ್ಯವಾಗಿಹಾಡಿಸಂಗೀತಾಸಕ್ತರ ಮನಗೆದ್ದರು. ಇವರಿಗೆಅನಿಲ ಮೇತ್ರಿತಬಲಾ ಹಾಗೂ ಅರ್ ಪಿ ಪಾಟೀಲ್ ಹಾರ್ಮೋನಿಯಂ ಸಾಥ್‍ನೀಡಿದರು.
ಆಶಾ ಸಯ್ಯದ ಸ್ವಾಗತಿಸಿದರು ಡಾ..ಪ್ರಭಾ ನೀರಲಗಿ ವಂದಿಸಿದರು.ಕಲಾಮಂಟಪಸಂಚಾಲಕಿ ವಿಶ್ವೇಶ್ವರಿ ಹಿರೇಮಠಅತಿಥಿ ಪರಿಚಯ ಮಾಡಿಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ,ಗುರು ಹಿರೇಮಠ,ಮಲ್ಲಿಕಾರ್ಜುನಚಿಕ್ಕಮಠ,ಪ್ರೊ. ಬಿ. ಎಸ್. ಶಿರೋಳ, ಮಹಾಂತೇಶ ನರೇಗಲ್ಲ,ಎಂ. ಬಿ. ಹೆಗ್ಗೇರಿ,ಸುಜಾತಾ ಹಡಗಲಿ ಸಲಹಾ ಸಮಿತಿ ಸದಸ್ಯರಾದ ಮಲ್ಲಪ್ಪ ಹೊಂಗಲ, ನಂದಾ ಗುಳೇದಗುಡ್ಡ, ಸುನೀತಾವಾಸರದ, ಮೇಘಾ ಹುಕ್ಕೇರಿಇತರರುಇದ್ದರು.