ಸಂಗೀತದಿಂದಮನಸ್ಸಿಗೆ ಶಾಂತಿ ನೆಮ್ಮದಿ

ಗಂಗಾವತಿ ಡಿ.22: ಜನಮಾನಸದಲ್ಲಿ ಸಂಗೀತ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ ಎಂದು ವೇ.ಮೂ.ಮಾರ್ಕಂಡಯ್ಯ ತಾತ ಹೇಳಿದರು.
ನಗರದ ಬೆಟ್ಟದ ವೀರಭದ್ರೇಶ್ವರ (ಚಂದ್ರಗಿರಿ) ದೇವಸ್ಥಾನದಲ್ಲಿ ರಾಜರಾಜೇಶ್ವರಿ ಜಾನಪದ ಹಾಗೂ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ (ರಿ) ಅರಳಹಳ್ಳಿ ಆಶ್ರಯದಲ್ಲಿ ನಡೆದ ಹಿಂದೂಸ್ಥಾನಿ ಸಂಗೀತ ಮತ್ತು ಸುಗಮ ಸಂಗೀತ, ದಾಸವಾಣಿ, ವಚನ ಗಾಯನ, ಜಾನಪದ ಗೀತೆಗಳ ಸಮಾರೋಪದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಸಂಗೀತ ಕಲಿಸಬೇಕು ಎಂದರು.
ಅರಳಹಳ್ಳಿಯ ಬೃಹನ್ಮಠದ ಶ್ರೀ ಶರಣಬಸವ ತಾತ, ಬೆಟ್ಟದ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಮಂಜಯ್ಯ ತಾತ, ಸಂಘದ ಕಾರ್ಯದರ್ಶಿ ರೇವಣಸಿದ್ದಯ್ಯ ತಾತ ಉಪಸ್ಥಿತರಿದ್ದರು.
ಪ್ರಿಯಾಂಕ, ವಂದನಾ ವಚನ ಗಾಯನ, ರವಿ ಕಾಶೆಟ್ಟಿ ಜಾನಪದ ಗೀತೆ, ಕೊಟ್ಟೂರೇಶ್ವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮೇಘನಾ, ಜಮುನಾ, ಭೂಮಿಕಾ ಹಿರೇಮಠ, ಭೂಮಿಕಾ ಅವರು ದಾಸಸಾಹಿತ್ಯ,ಭಾವಗೀತೆ, ಭಕ್ತಿಗೀತೆ ಹಾಡಿದರು. ದೊಡ್ಡಬಸವ ನಾಗಲೀಕರ್ ವಿಶೇಷ ಹಾರ್ಮೋನಿಯಂ, ವಿರುಪಾಕ್ಷನವರು ತಬಲಾ ಸೋಲೋ ನುಡಿಸಿದರು.