ಸಂಗೀತಕ್ಕೆ ಭಾಷೆಯಿಲ್ಲ:ಗಂಗಾಧರ ಶ್ರೀ

ಕಲಬುರಗಿ,ನ.5-ಸಂಗೀತಕ್ಕೆ ಭಾಷೆಯಿಲ್ಲ. ಅದನ್ನು ಯಾವ ಭಾಷಿಕನಾದರೂ ಆಲಿಸಿ ಆನಂದಿಸಬಹುದು. ಭಾಷೆಯು ಹಾಗಲ್ಲ. ಮನಸ್ಸಿನ ಅಲೋಚನೆ/ಭಾವನೆಗಳನ್ನು ಒಂದು ನಿರ್ದಿಷ್ಟ ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸುವಾಗ ಆ ಭಾಷೆಯನ್ನು ಬಲ್ಲವನಿಗೆ ಮಾತ್ರ ಆ ಧ್ವನಿಯು ಅಭಿವ್ಯಕ್ತಿಸುವ ಅರ್ಥ ತಿಳಿಯುತ್ತದೆ. ಅನ್ಯಭಾಷಿಕನಿಗೆ ಅದು ಕೇವಲ ಸದ್ದಾಗಿ ಕೇಳಿಸುತ್ತದೆ ಎಂದು ಅಗ್ಗಿಮಠದ ಗಂಗಾಧರ ಸ್ವಾಮಿಗಳು ಹೇಳಿದರು.
ಗಾನ ಭಾರತಿ ಸಂಗೀತ ಸಾಹಿತ್ಯ ಸೇವಾ ಸಂಸ್ಥೆ ಚೌಡಾಪೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕ ಗಾನ ಲಹರಿ ಸಾಂಸ್ಕೃತಿಕ ಕಾರ್ಯಕ್ರಮ ನಗರದ ಮಕ್ತಂಪುರದ ರಾಚೋಟೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಗಾನ ಲಹರಿ ಸಾಂಸ್ಕøತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಉದ್ಘಾಟಕರಾಗಿ ಶಿವರಾಜ ಕಾಳಗಿ, ಅತಿಥಿಗಳಾಗಿ ಮಲ್ಲಿಕಾರ್ಜುನ ಹಿಪ್ಪರಗಿ, ಶರಣು ರಾಂಪೂರೆ, ವಿನೋದ ಜಿ.ಕಲಬುರ್ಗಿ, ಜಗನ್ನಾಥ ಪಾಟೀಲ ಆಗಮಿಸಿದ್ದರು. ತೇಜು ಎಸ್.ನಾಗೋಜಿ, ಕುಮಾರಿ ಪಲ್ಲವಿ ಎಸ್.ಸಪ್ಪನಗೋಳ, ಪ್ರಭುಲಿಂಗಯ್ಯ ಹಿರೇಮಠ, ಅರವಿಂದ ಪಾಟೀಲ, ನಿಜಲಿಂಗ ಮೂರ್ತಿ ಅಗ್ಗಿಮಠ ಅವರಿಂದ ಸುಗಮಸಂಗೀತ , ವಚನ ಗಾಯನ , ತತ್ವಪದಗಳ ಕಾರ್ಯಕ್ರಮ ಜರುಗಿತು. ವಾದ್ಯ ಸಹಕಾರವನ್ನು ಸೈದಪ್ಪ ಚೌಡಾಪುರ, ಶಿವಕುಮಾರ ಬೆಟ್ಟ ಜೇವರ್ಗಿ , ವಿನೋದ ದಸ್ತಾಪುರ, ಅಭಿಲಾಷ್ ಮಠಪತಿ, ಸೋಮಶೇಖರ ಕಲ್ಯಾಣಿ, ಸಂಸ್ಥೆಯ ಅಧ್ಯಕ್ಷೆ ಮಹಾದೇವಿ ಎಸ್.ಸಪ್ಪನಗೋಳ ಸ್ವಾಗತಿಸಿದರು. ಬಂಡಯ್ಯ ಸ್ವಾಮಿ ಸುಂಟನೂರ ನಿರೂಪಿಸಿದರು.