ಸಂಗಾಪೂರ ಗ್ರಾಮದಲ್ಲಿ ಬಾಳೆಹಣ್ಣಿನ ಬೆಳೆ ನಾಶಃ ರೈತ ಬಸವರಾಜ ಕಾತ್ರಾಳ ಪರಿಹಾರಕ್ಕೆ ಮನವಿ

ವಿಜಯಪುರ, ಮೇ.20-ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪೂರ (ಎಸ್.ಎಸ್.) ಗ್ರಾಮದ ರೈತರಾದ ಬಸವರಾಜ ಕಾತ್ರಾಳ ಇವರು ತಮ್ಮ ಜಮೀನದಲ್ಲಿ 3 ಎಕರೆ ಬಾಳೆ ಬೆಳೆದಿದ್ದು, ಕೋವಿಡ್-19 ಲಾಕ್‍ಡೌನ್ ಪರಿಣಾಮವಾಗಿ ಇವರು ಬೆಳೆದ ಬೆಳೆಯು ವ್ಯಾಪಾರಸ್ಥರು ಬಾಳೆಯನ್ನು ಖರೀದಿ ಮಾಡಿಕೊಂಡು ಹೋಗದೇ ಇರುವ ಕಾರಣ ಹಾಗೂ ಇವರು ಬೆಳೆದ ಬೆಳೆಯು ಇನ್ನೇನು ಕೈ ಸೇರಬೇಕೆನ್ನುವ ಹೊತ್ತಿನಲ್ಲಿ ಅಕಾಲಿಕ ಗಾಳಿ ಮಳೆಗೆ ಬೆಳೆಯು ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ಕಣ್ಣಿರಿಟ್ಟದ್ದಾರೆ.
ಇವರು ಬೆಳೆದ ಬಾಳೆ ಬೆಳೆಯು ಬಾಳಿಗೆ ಬೆಳಕಾಗುವಷ್ಟರಲ್ಲಿ ಕತ್ತಲಾಗಿದ್ದು ವ್ಯಾಪಾರಸ್ಥರು ಖರೀದಿ ಮಾಡದೇ ಇರುವದರಿಂದ ಗಾಳಿಯಿಂದಾಗಿ ಬಾಳೆ ಹಣ್ಣು ಹಣ್ಣಾಗಿ ನಾಶಗೊಂಡಿದೆ. ಬೆಳೆದ ಬೆಳೆಯನ್ನು ಖರೀದಿ ಮಾಡುವಂತೆ ವ್ಯಾಪಾರಸ್ಥರಿಗೆ ತಿಳಿಸಿದರೂ ಯಾವೊಬ್ಬ ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರಿಂದ ಬಾಳೆ ಬೆಳೆದ ರೈತ ಸಂಕಷ್ಟದ ದಿನಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಜಿಲ್ಲಾಡಳಿತವು ಬೆಳೆದ ಬಾಳೆಯನ್ನು ಖರೀದಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು. ಹಾಗೂ ಕಷ್ಟಪಟ್ಟು ಬೆಳೆದ ಬಾಳೆಗೆ ಪರಿಹಾರಧನ ನೀಡುವಂತೆ ಆಗ್ರಹಿಸಿದ್ದಾರೆ.
ಲಾಕ್‍ಡೌನ್ ಸಂದರ್ಭದಲ್ಲಿ ಬೆಳೆದ ಬಾಳೆಯನ್ನು ಕಳೆದುಕೊಂಡ ರೈತನಾದ ನನಗೆ ಸರಕಾರವು ಎಚ್ಚೆತ್ತುಕೊಂಡು ಪರಿಹಾರ ಧನ ಘೋಷಣೆ ಮಾಡಬೇಕೆಂದು ರೈತರಾದ ಬಸವರಾಜ ಕಾತ್ರಾಳ ಅವರು ಪ್ರಕಟಣೆಯ ಮೂಲಕ ಜಿಲ್ಲಾಡಳಿತ ಹಾಗೂ ಮಾನ್ಯ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.