ಸಂಗಯ್ಯ ತಾತ ಲಿಂಗೈಕ್ಯ

ದೇವದುರ್ಗ.ಡಿ.೨೫-ತಾಲೂಕಿನ ತಿಂಥಣಿ ಬ್ರಿಡ್ಜ್ ಸಮೀಪದ ದೇವರ ಹಾಲಬಾವಿಯಮಠದ ಶ್ರೀ ಸಂಗಯ್ಯ ತಾತ (೬೫) ಅನಾರೋಗ್ಯದಿಂದ ಗುರುವಾರ ಲಿಂಗೈಕ್ಯರಾದರು. ಶ್ರೀಗಳಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಸೇರಿ ಅಪಾರ ಬಂಧು ಬಳಗವಿದೆ. ಶ್ರೀಗಳಿಗೆ ದೇವದುರ್ಗ, ಸುರಪುರ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪಾರ ಭಕ್ತರಿದ್ದಾರೆ. ಶ್ರೀಗಳ ಅಂತ್ಯಕ್ರಿಯೆ ಡಿ.೨೫ರಂದು ಮಧ್ಯಾಹ್ನ ೩ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

೨೫-ಡಿವಿಡಿ-೨

ಸಂಗಯ್ಯ ತಾತ