ಸಂಗಮ ವಂಶದ ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಕುರುಬ ಮೂಲದವರು: ದೇವಕಾಂತ ಬಿಜ್ಜರಗಿ

ವಿಜಯಪುರ, ಎ.20-ಸಂಗಮ ವಂಶದ ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಸಂಗಮ ವಂಶಮಾತ್ರವಲ್ಲದೆ ಸಾಳ್ವ, ತುಳುವ ಮತ್ತು ಅರವೀಡರು ಕುರುಬ ಮೂಲದವರೆ ಆಗಿದ್ದರೂ ಕೂಡ ಕೆಲವು ಹಿತಾಸಕ್ತ ಇತಿಹಾಸಕಾರರಿಂದ ಅವರ ಜಾತಿಯನ್ನು ಬಹಿರಂಗವಾಗಿ ಒಪ್ಪಿಕೊಳ್ಳದೆ ಮರೆ ಮಾಚಲು ಯತ್ನಿಸುತ್ತಿವೆ ಇಂಥ ಇತಿಹಾಸ ತಿರುಚುವವರಿಂದ ನಾವು ಎಚ್ಚರದಿಂದ ಇರಬೇಕೆಂದು 685ನೇ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ಆಚರಿಸಿ ರಾಯಣ್ಣ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ದೇವಕಾಂತ ಬಿಜ್ಜರಗಿ ಮಾತನಾಡಿದರು
ಬೀರೆಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಬೀರಪ್ಪ ಜುಮನಾಳ ಮಾತನಾಡಿ ಎಪ್ರೀಲ 18 1336 ರಲ್ಲಿ ವಿಜಯನಗರ ಸಮ್ರಾಜ್ಯವು ಸ್ವತಂತ್ರವಾಗಿ ಆಡಳಿತ ನಡೆಸಿದ್ದು ನಮ್ಮ ನಾಡಿನ ಹೆಮ್ಮೆಯ ಸಂಗತಿ. ಮುಂದಿನ ದಿನಮಾನಗಳಲ್ಲಿ ಸರ್ಕಾರವೆ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನವಾದ ಎಪ್ರೀಲ 18 ರಂದು ಹಂಪಿ ಉತ್ಸವವನ್ನು ಆಚರಸಬೀಕೆಂದು ಒತ್ತಾಯಿಸಿದರು.
ಬೀರೇಶ್ವರ ಕುರಿ ಮತ್ತು ಉಣ್ಣೆ ಉತ್ಪಾಕರ ಸಹಕಾರಿ ಸಂಘ, ರಾಯಣ್ಣ ಯುವ ಸೇನೆ ವಿಜಯಪುರ ನಗರಘಟಕ ಕುರುಬರ ಸಂಘ ಹಾಗೂ ಸಂಗೋಳ್ಳಿ ರಾಯಣ್ಣ ಉಚಿತ ವಸತಿ ನಿಲಯಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಮಾಲಿಂಗರಾಯ ಮಹಾರಾಯರು ನಾಗಠಾಣ ವಹಿಸಿದ್ದರು. ಈ ಸಂಧರ್ಬದಲ್ಲಿ
ರಾಯಣ್ಣ ಯುವ ಸೇನೆ ಪ್ರದಾನ ಕಾರ್ಯದರ್ಶಿಮಲ್ಲಪ್ಪ ಬಿದರಿ, ರಾಜು ಕಗ್ಗೋಡ ಅದ್ಯಕ್ಷರು ವಿಜಯಪುರ ನಗರ ಘಟಕ ಕುರುಬರ ಸಂW, ಶೇಖರ ತೋಳಮಟ್ಟಿÀ, ಸತೀಶ ಆಡವಿ, ಸಂಜು ಪಾಂಡ್ರೆ, ಮಾಳು ಗುಗದಡ್ಡಿ, ವಿಜಯ ಕಲಾದಗಿ, ರಮೇಶ ಪೂಜಾರಿ, ಶಂಕರ ಪೂಜಾರಿ ಭರಟಗಿ, ಮರಗೂ ಪೂಜಾರಿ, ಆನಂದ ಪೂಜಾರಿ, ಭೀಮು ಅಚ್ಚೇಗಾರ ಮುಂತಾದವರು ಉಪಸ್ಥಿತರಿದ್ದರು.