ಸಂಗಮ ರತ್ನ ಪ್ರಶಸ್ತಿಗೆ ಆಯ್ಕೆ

ವಿಜಯಪುರ:ಜೂ.17: ತಾಲೂಕಿನ ಸವನಹಳ್ಳಿ ಗ್ರಾಮದ ನಿವಾಸಿಯಾದ ಮಲ್ಲಿಕಾರ್ಜನ ಹುಣಶ್ಯಾಳ ಇವರು “ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ” ಆಯ್ಕೆಯಾಗಿದ್ದಾರೆ. ಸಾಮಾಜಿಕ ಕಾಳಜಿ ಹಾಗೂ ಯುವ ಸಬಲೀಕರಣ ಮತ್ತು ಸರಕಾರಿ ಶಾಲೆಗಳ & ಗ್ರಾಮದ ಯುವಕರ ಅಭಿವೃದ್ದಿಗೆ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅವರನ್ನು ಕರ್ನಾಟಕ ಸಂಯುಕ್ತ ರಂಗದ ಜಾಗೃತಿ ಉದ್ಘಾಟನೆ ಮತ್ತು ಸಂಗಮೋತ್ಸವ ಸಮಾರಂಭ ಅಂಗವಾಗಿ ದಿನಾಂಕ 24.06.2023 ರಂದು ಬೆಳಗ್ಗೆ 11.30 ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಸಾಹಿತ್ಯ ಭವನ, ವಿಜಯನಗರ ಮೈಸೂರನಲ್ಲಿ ನಡೆಯುತ್ತಿರುವ ಸಂಗಮೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಎಂದು ಬೆಂಗಳೂರ ಜನತಾ ಸಮಾಜ ಸೇವಾ ಟ್ರಸ್ಟದ ಅಧ್ಯಕ್ಷರಾದ ಹೆಚ್. ಸದಾಶಿವ ಮತ್ತು ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.