ಸಂಗಮೇಶ್ವರ ಶ್ರೀ ಪ್ರಶಸ್ತಿ ಪ್ರದಾನ

ಕಲಬುರಗಿ,ಏ.29-ಇಂದಿನ ಇಂಟರ್ನೆಟ್ ಯುಗದಲ್ಲಿಯು ಧರ್ಮ ಸಂಸ್ಕøತಿ ಪರಂಪರೆ ಉಳಿದಿದೆ ಎಂದರೆ ತೊನಸನಹಳ್ಳಿ ಸಂಗಮೇಶ್ವರ ಸಂಸ್ಥಾನದಂತ ಧಾರ್ಮಿಕ ಕ್ಷೇತ್ರಗಳಿಂದಲೆ ಧರ್ಮ ಸಂಸ್ಕøತಿ ಪರಂಪರೆ ಉಳಿದಿದೆ ಎಂದು ಖ್ಯಾತ ಪ್ರಸುತಿ ವೈದ್ಯರಾದ ಡಾ.ಸಂಜನಾ ಪಾಟೀಲ ತಳ್ಳುರ ಹೇಳಿದರು.
ಶಹಾಬಾದ ತಾಲೂಕಿನ ತೊನಸನಹಳ್ಳಿ ಸಂಗಮೇಶ್ವರ ಸಂಸ್ಥನ ಮಠದ ರೇವಣಸಿದ್ದ ಚರಂತೇಶ್ವರ ಶೀವಾಚಾರ್ಯರ ಪಟ್ಟಾದಿಕಾರ ವದರ್ಂತಿ ಮಹೋತ್ಸವ ಸಂಗಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ನೀಡುವ ಸಂಗಮೇಶ್ವರ ಶ್ರೀ ಪ್ರಷಸ್ತಿ ಸ್ವೀಕರಿಸಿ ಮಾತನಾಡಿದರು.
ಸಮಾಜಮುಖಿಯಾಗಿ ಕೆಲಸ ಮಾಡುವವರನ್ನು ಗರುತಿಸಿ ಗೌರವಿಸುವ ಕೆಲಸ ಮಾಡುತ್ತಿರುವ ತೊನಸನಹಳ್ಲಿ ಪೂಜ್ಯರಿಗೆ ಎಲ್ಲ ಪ್ರಶಸ್ತಿ ಪುರಸ್ಕøತರ ಪರವಾಗಿ ಬಕ್ತಿಪೂರ್ವಕ ಧನ್ನವಾದಗಳನ್ನು ತಿಳಿಸುತ್ತೆನೆ ಎಂದು ಹೇಳಿ ಇಂದು ನಮಗೆ ಸಿಕ್ಕ ಗೌರವ ಮುಂದೆ ವೇದಿಕೆ ಮುಂದೆ ಕಳಿತು ಪುರಾಣ ಕೇಳುತ್ತಿರುವ ನೀವುಗಳು ವಿಶೇಷವಾಗಿ ಮಹಿಳೆಯರು ನೀವು ಕೂಡಾ ಯಾವುದೆ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ನಿಮಗೂ ಗೌರವ ಸಿಗಬಹುದು ಆ ನಿಟ್ಟಿನಲ್ಲಿ ನೀವುಗಳು ಕೇಲಸ ಮಾಡಿ ಎಂದು ಹೇಳಿದರು. 30ರಂದು ತೊನಸನಹಳ್ಳಿ ಜಾತ್ರೆ ಸಂಭ್ರಮದಿಂದ ಮಾಡೋಣ. ಅದೇ ರೀತಿ ಪ್ರಜಾಪ್ರಭುತ್ವದ ಹಬ್ಬ ಮೇ.10ರಂದು ಅಷ್ಟೇ ಸಂಭ್ರಮದಿಂದ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಜಾತ್ರೆ ಮಾಡೋಣ ಎಂದು ಹೇಳಿ ಎಲ್ಲರು ತಪ್ಪದೆ ಮತದಾನ ಮಾಡಿ ಎಂದು ಕರೆ ನೀಡಿದರು.
ಡಾ.ಸಂಜನಾ ಪಾಟೀಲ, ದೀಪಾ ಆನಂದ ದಂಡೋತಿ, ಮಲ್ಲಿನಾಥ ಪಾಟೀಲ ಕಾಳಗಿ, ಬಸವರಾಜ ಕೋಳಕೂರ ಅವರಿಗೆ ಸಂಗಮೇಶ್ವರ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಹೋರಾಟಗಾರ ಎಂ.ಎಸ್.ಪಾಟೀಲ್ ನರಿಬೋಳರನ್ನು ಸನ್ಮಾನಿಸಿದರು. ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರರನ್ನು ಬಕ್ತಾಧಿಗಳು ತುಲಾಬಾರ ನೆರವೇರಿಸಿದರು. ಸಿದ್ದಲಿಂಗ ಸ್ವಾಮಿಗಳು ಪೇಠಸಿರೂರ ಸಾನಿಧ್ಯ ವಹಿಸಿದ್ದರು. ಆನಂದ ದಂಡೋತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಧ್ಯಮ ಕ್ಷೇತ್ರದ ಶಿವಕುಮಾರ ಲಕ್ಮೀಪುತ್ರ ಅವರುಗಳನ್ನು ಪೂಜ್ಯರು ಸನ್ಮಾನಿಸಿದರು.